ನ್ಯೂಯಾರ್ಕ್: ವಿಶ್ವಸಂಸ್ಥೆ ಭದ್ರತಾ ಮಂಡಳಿ ತಾನು ಅಫ್ಘಾನಿಸ್ತಾನದಲ್ಲಿ ಶಾಂತಿಪಾಲಕ ಪಡೆಗಳನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆಯನ್ನು ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿನಲ್ಲಿ ಸುರಕ್ಷಿತ ವಲಯ(ಸೇಫ್ ಜೋನ್) ಸ್ಥಾಪನೆಗಾಗಿ ಸೋಮವಾರ ಬ್ರಿಟನ್ ಜೊತೆ ಮಾತುಕತೆ ನಡೆಸುವುದಾಗಿ ಫ್ರಾನ್ಸ್ ಅಧ್ಯಕ್ಷ ಮೆಕ್ರಾನ್ ಈ ಹಿಂದೆ ತಿಳಿಸಿದ್ದರು.
ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆ ಮತ್ತು ಹಲವು ಸ್ವಸಹಾಯ ಸಂಘ್ಹಟನೆಗಳ ನೆರವು ಕಾರ್ಯಕ್ರಮಗಳು ಜಾರಿಯಲ್ಲಿರುಂತೆ ಮಾಡಲು ಕಾಬೂಲಿನಲ್ಲಿ ಸುರಕ್ಷಿತ ವಲಯ ಸ್ಥಾಪನೆ ಸಲುವಾಗಿ ಫ್ರಾನ್ಸ್ ಮತ್ತು ಬ್ರಿಟನ್ ಯೋಜನೆ ರೂಪಿಸುತ್ತಿದೆ. ಈ ಯೋಜನೆಗೆ ಅಮೆರಿಕವೂ ಬೆಂಬಲ ಸೂಚಿಸಲಿದೆ ಎನ್ನಲಾಗಿದೆ.
ಯೋಜನೆಯ ರೂಪುರೇಷೆಗಳು ಸಿದ್ಧಗೊಂಡ ನಂತರ ವಿಶ್ವ ಭದ್ರತಾ ಮಂಡಳಿ ಅನುಮೋದನೆ ಸಿಗಬೇಕಿದೆ. ದೇಶ ತೊರೆಯಲಿಚ್ಛಿಸಿರುವ ಆಫ್ಘನ್ನರಿಗೆ ಸುರಕ್ಷಿತ ವಾತಾವರಣ ನಿರ್ಮಾಣವೂ ಯೋಜನೆಯ ಉದ್ದೇಶಗಳಲ್ಲೊಂದಾಗಿದೆ.