ತಿರುವನಂತಪುರ: ರಾಜ್ಯದಲ್ಲಿ ಲಾಕ್ ಡೌನ್ ನಿಯಮವನ್ನು ಪರಿಷ್ಕರಿಸಲಾಗಿದೆ. ಹತ್ತಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬವನ್ನು ಕೋವಿಡ್ ಬಾಧಿಸಿದಲ್ಲಿ ಮೈಕ್ರೋ-ಕಂಟ್ಯೆನ್ಮೆಂಟ್ ವಲಯವನ್ನಾಗಿ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಐದು ಕ್ಕಿಂತ ಹೆಚ್ಚು ರೋಗಿಗಳಿದ್ದರೆ ಕ್ಲಸ್ಟರ್ ಎಂದು ಪರಿಗಣಿಸಲಾಗುತ್ತದೆ. ಈ ಕಂಟ್ಯೆನ್ಮೆಂಟ್ ಗಳಲ್ಲಿ ನಿಯಂತ್ರಣವು ಏಳು ದಿನಗಳವರೆಗೆ ಇರುತ್ತದೆ. ಹೊಸ ಬದಲಾವಣೆಯು ಸಂಪೂರ್ಣ ವಾರ್ಡ್ ನ್ನು ಲಾಕ್ ಡೌನ್ ಗೆ ಒಳಪಡಿಸುವ ಬದಲು ಸೂಕ್ಷ್ಮ ಮಟ್ಟಕ್ಕೆ ಹೋಗುವುದು.
ಮೈಕ್ರೋ ಕಂಟೈನ್‌ಮೆಂಟ್ ವಲಯಗಳನ್ನು ಪ್ರಸ್ತುತ ರಾಜ್ಯದಲ್ಲಿ ವಾರ್ಡ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಜಾರಿಗೊಳಿಸಲಾಗಿದೆ. ಆದರೆ ಸರ್ಕಾರದ ಹೊಸ ಆದೇಶವು ಯಾವುದೇ ಸಣ್ಣ ಪ್ರದೇಶವನ್ನು, ಒಂದು ಕುಟುಂಬಕ್ಕೂ ಸಹ ರೋಗ ಹರಡಿದರೆ ಮೈಕ್ರೋ ಕಂಟೋನ್ಮೆಂಟ್ ವಲಯ ಎಂದು ಘೋಷಿಸಬಹುದು. ಇನ್ನು ಮುಂದೆ ವಾರ್ಡ್ ಆಧಾರದಲ್ಲಿ ಇರುವುದಿಲ್ಲ ಎಂದು ಹೇಳುತ್ತದೆ.
ವಸತಿ ಕಾಲೋನಿಗಳು, ಶಾಪಿಂಗ್ ಮಾಲ್‌ಗಳು, ಕೈಗಾರಿಕಾ ಸಂಸ್ಥೆಗಳು, ಮಾರುಕಟ್ಟೆಗಳು, ಮೀನು ಮಾರುಕಟ್ಟೆಗಳು ಮತ್ತು ಫ್ಲಾಟ್‌ಗಳಂತಹ ಯಾವುದೇ ಪ್ರದೇಶದಲ್ಲಿ ಏಕಾಏಕಿ ಸೋಂಕು ಉಲ್ಬಣಿಸಿದರೆ ಮೈಕ್ರೋ-ಕಂಟೈನ್‌ಮೆಂಟ್ ವಲಯಗಳನ್ನು ಸ್ಥಾಪಿಸಬಹುದು. ಒಂದೇ ದಿನದಲ್ಲಿ 100 ಮೀಟರ್ ಪ್ರದೇಶದಲ್ಲಿ ಐದು ಜನರಿಗೆ ಸೋಂಕು ದೃಢಪಟ್ಟರೆ, ಅಲ್ಲಿ ಮೈಕ್ರೋ ಕಂಟೈನ್‌ಮೆಂಟ್ ವಲಯವೆಂದು ಘೋಷಿಸಬಹುದು ಮತ್ತು ಕ್ರಮ ಕೈಗೊಳ್ಳಬಹುದು ಎಂದು ಪರಿಷ್ಕೃತ ಆದೇಶದಲ್ಲಿ ತಿಳಿಸಲಾಗಿದೆ.