ತಿರುವನಂತಪುರಂ: ಓಣಂ ಸಂದರ್ಭ ಹಾರ್ಟಿಕಾರ್ಪ್ ನಿಂದ ತರಕಾರಿ ಅಪಹರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಕೃಷಿ ಸಚಿವ ಪಿ ಪ್ರಸಾದ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.
ಓಣಂ ಸಮಯದಲ್ಲಿ ತರಕಾರಿ ಮಾರಾಟ ಮಾಡುವ ಮೂಲಕ ಕೇರಳೀಯರನ್ನು ಸಾರ್ವಜನಿಕವಾಗಿ ಲೂಟಿ ಮಾಡಿದ ಹಾರ್ಟಿಕಾರ್ಪ್ ನ ಹಗರಣವು ಮಾಧ್ಯಮಗಳ ಮೂಲಕ ಬಯಲಾಗಿತ್ತು. ಹಾರ್ಟಿಕಾರ್ಪ್ ಸಾಮಾನ್ಯ ಮಾರುಕಟ್ಟೆಗಿಂತ ತರಕಾರಿಗಳಿಗೆ ಹೆಚ್ಚಿನ ದರವನ್ನು ವಿಧಿಸಿತ್ತು. ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಳ್ಳುತ್ತಿರುವಂತೆ, ಹಾರ್ಟಿಕಾರ್ಪ್ ಬೆಲೆಗಳನ್ನು ಗಣನೀಯವಾಗಿ ಇಳಿಸಿತು.
ಓಣಂ sಋತುವಿನಲ್ಲಿಯೂ ಸಹ, ಹಾರ್ಟಿಕಾರ್ಪ್ ಇಂತಹ ಹಗಲು ದರೋಡೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು. 30 ರಷ್ಟು ಸಬ್ಸಿಡಿ ನೀಡುವುದಾಗಿ ಹೇಳಿದ್ದ ಸರ್ಕಾರದ ಹೇಳಿಕೆಯನ್ನೂ ಗಾಳಿಗೆ ತೂರಲಾಗಿತ್ತು. ವಿವಾದದ ಬಳಿಕ ರಾಜ್ಯ ಸರ್ಕಾರವು ತರಕಾರಿಗಳಿಗೆ ಹಾರ್ಟಿಕಾರ್ಪ್ ವಿಧಿಸುವ ಹೆಚ್ಚಿನ ಬೆಲೆಯ ಬಗ್ಗೆ ತನಿಖೆಗೆ ಘೋಷಿಸಿತು. ಕೃಷಿ ಸಚಿವ ಪಿ ಪ್ರಸಾದ್ ಅವರು ಈ ವಿಷಯದ ಬಗ್ಗೆ ಎಂಡಿಯಿಂದ ವಿವರಣೆ ಕೇಳುವುದಾಗಿ ಹೇಳಿರುವರು.
ಹಾರ್ಟಿಕಾರ್ಪ್ ತರಕಾರಿಗಳಿಗೆ ಅಮಿತ ಬೆಲೆ ಹೇರುವ ಮೂಲಕ ಗ್ರಾಹಕರನ್ನು ಕೊಳ್ಳೆಹೊಡೆದು ಲಕ್ಷಗಟ್ಟಲೆ ಲಾಭ ಗಳಿಸಿತು. ಆದರೆ ರಾಜ್ಯದ ರೈತರಿಗೆ ನಯಾ ಪೈಸೆ ಲಾಭವೇನೂ ಈ ನಿಟ್ಟಿನಲ್ಲಿ ಲಭಿಸಿಲ್ಲ ಎಂಬುದೂ ಗಮನಾರ್ಹ.