ಕಾಸರಗೋಡು: ಕೃಷಿಕ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ವಿಸ್ತೃತ ಕಾರ್ಯಕ್ರಮಗಳು ನಡೆಯಲಿವೆ. ಕೃಷಿ ಇಲಾಖೆ ವತಿಯಿಂದ ಜಿಲ್ಲೆಯ 41 ಕೃಷಿಭವನಗಳಲ್ಲಿ ಆ.17ರಂದು ಕೃಷಿ ಕಾರ್ಮಿಕರು, ಮಹಿಳೆಯರು, ಪರಿಶಿಷ್ಟ ಜಾತಿ-ಪಂಗಡ ವಿಭಾಗಗಳ ಸಾಧಕ ಕೃಷಿಕರಿಗೆ ಅಭಿನಂದನೆ ನಡೆಯಲಿದೆ.
ಜಿಲ್ಲೆಯಲ್ಲಿ 57 ಓಣಂ ಸಂತೆಗಳ ಆರಂಭಕ್ಕೆ ಕ್ರಮ
ಓಣಂ ಹಬ್ಬದ ವೇಳೆ ಗಗನಕ್ಕೇರುವ ತರಕಾರಿ ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೃಷಿಕ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 57 ಓಣಂ ಸಂತೆಗಳನ್ನು ಆರಂಭಿಸಲಾಗುವುದು. ಓಣಂ ಹಬ್ಬದ ಉತ್ರಾಡಂ ದಿನದ ವರೆಗೆ ಈ ಓಣಂ ಸಂತೆಗಳು ಚಟುವಟಿಕೆ ನಡೆಸಲಿವೆ. ಕೃಷಿ ಭವನಗಳ ವ್ಯಾಪ್ತಿಯ ಕೃಷಿಕರಿಂದ ಸಂಗ್ರಹಿಸಲಾದ ತರಕಾರಿಗಳನ್ನು ಸದ್ರಿ ಲಭಿಸುವ ದರದ ಶೇ 10 ಅಧಿಕ ಬೆಲೆ ನೀಡಿ ಖರೀದಿಸಿ, ಮಾರುಕಟ್ಟೆ ಬೆಲೆಗಿಂತ ಶೇ 30 ಬೆಲೆ ಕಡಿತದಲ್ಲಿ ಓಣಂ ಸಂತೆಯಲ್ಲಿ ಮಾರಾಟ ಮಾಡಲಾಗುವುದು.