HEALTH TIPS

ನೇತಾಜಿ ಜಯಂತಿ ಪರಾಕ್ರಮ ದಿವಸ್ ಆಚರಣೆ ಬಗ್ಗೆ ಸರ್ಕಾರದ ವಿವರಣೆ

             ನವದೆಹಲಿ: ಭಾರತ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ವರ್ಷಾಪೂರ್ತಿ ಆಚರಿಸುತ್ತಿದೆ. 2021ರ ಜನವರಿ 23ರಂದು ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು, ಮಾನ್ಯ ಪ್ರಧಾನಮಂತ್ರಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

          ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳನ್ನು 2021ರ ಜನವರಿ 23ರಂದು ಕೋಲ್ಕತ್ತಾದಲ್ಲಿ ಮತ್ತು 2021ರ ಮಾರ್ಚ್ 5ರಂದು ಜಬಲ್ಪುರದಲ್ಲಿ ಆಯೋಜಿಸಲಾಗಿತ್ತು.

ಮಾನ್ಯ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಈ ಆಚರಣೆಗಾಗಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಗಣ್ಯ ವ್ಯಕ್ತಿಗಳು, ಇತಿಹಾಸತಜ್ಞರು, ಲೇಖಕರು, ವಿಷಯ ತಜ್ಞರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಸದಸ್ಯರು ಹಾಗೂ ಆಜಾದ್ ಹಿಂದ್ ಸೇನೆ (ಐ.ಎನ್.ಎ.)ಯೊಂದಿಗೆ ಸಂಪರ್ಕಿತರಾದ ಗಣ್ಯ ವ್ಯಕ್ತಿಗಳೂ ಇದ್ದಾರೆ. ಜನವರಿ 23ನ್ನು ಪ್ರತಿವರ್ಷ ಪರಾಕ್ರಮ ದಿವಸವಾಗಿ ಆಚರಿಸಲು ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.

ಭಾರತ ಸರ್ಕಾರ, ಐಎನ್‌ಎಯ ಹುತಾತ್ಮರ ಸ್ಮಾರಕವನ್ನು ಕೆಂಪು ಕೋಟೆಯಲ್ಲಿ ಮತ್ತು ಕೋಲ್ಕತ್ತಾ ಬಳಿಯ ನೀಲ್ ಗಂಜ್ ನಲ್ಲಿ ಸ್ಥಾಪಿಸಲು, ನೇತಾಜಿ ಮತ್ತು ಐ.ಎನ್.ಎ.ಕುರಿತ ಕಿರು ವಿಡಿಯೋ, ಐಎನ್‌ಎ ಟ್ರಯಲ್ ಕುರಿತ ಸಾಕ್ಷ್ಯ ಚಿತ್ರ ನಿರ್ಮಾಣ, ಕರ್ನಲ್ ದಿಲ್ಲಾನ್ ಮತ್ತು ಜನರಲ್ ಶಹನವಾಜ್ ಖಾನ್ ಅವರ ಜೀವನ ಚರಿತ್ರೆಯ ಪ್ರಕಟಣೆ, ಐ.ಎನ್.ಎ. ಚಿತ್ರಗಳನ್ನು ಸಚಿತ್ರ ಪುಸ್ತಕವಾಗಿ ಪ್ರಕಟಿಸುವ, ನೇತಾಜಿ ಕುರಿತಂತೆ ಮಕ್ಕಳ-ಸ್ನೇಹಿ ಕಾಮಿಕ್ ನಂಥ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ.

            ಭಾರತ ಸರ್ಕಾರ ನೇತಾಜಿ ಮತ್ತು ಐ.ಎನ್.ಎ. ಸಂಬಂಧಿತ ಮಹತ್ವದ ದಿನಾಂಕಗಳ ಆಚರಣೆಯನ್ನೂ ಅಂದರೆ ಮೊಯರಾಂಗ್ ದಿನ -ಬ್ರಿಟಿಷ್ ಸೇನೆಯು ಭಾರತದ ನೆಲದಲ್ಲಿ ಸೋಲಿಸಲ್ಪಟ್ಟ-14ನೇ ಏಪ್ರಿಲ್, ಐಎನ್‌ಎ ದಿನಾಚರಣೆ -21ನೇ ಅಕ್ಟೋಬರ್, ನೇತಾಜಿ ಅಂಡಮಾನ್‌ ಗೆ ಹೋಗಿ, ಧ್ವಜ ಹಾರಿಸಿದ-30 ಡಿಸೆಂಬರ್, ಇಂಫಾಲದ ಐಎನ್‌ಎ ಯುದ್ಧದ ದಿನಗಳನ್ನು ಆಚರಿಸುತ್ತಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯವನ್ನು ನವ ದೆಹಲಿಯ ಕೆಂಪು ಕೋಟೆಯಲ್ಲಿ ಸ್ಥಾಪಿಸಲಾಗಿದೆ. ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ಪ್ರಸ್ತುತ ಸುಭಾಷ್ ಚಂದ್ರ ಬೋಸ್ ಕುರಿತ ವಿಸ್ತೃತ ವಸ್ತು ಪ್ರದರ್ಶನ ನಡೆಯುತ್ತಿದೆ.

* ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಳಿಕ ಈ ಕೆಳಕಂಡ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ:

* ನೇತಾಜಿ ಸುಭಾಷ್ ವಿಶ್ವವಿದ್ಯಾಲಯ, ಪೋಖ್ಹರಿ, ಜೆಮ್ ಷೆಡ್ಪುರ

* ನೇತಾಜಿ ಸುಭಾಷ್ ಮುಕ್ತ ವಿಶ್ವವಿದ್ಯಾಲಯ, ಕೋಲ್ಕತ್ತಾ,

* ನೇತಾಜಿ ಸುಭಾಷ್ ತಾಂತ್ರಿಕ ವಿಶ್ವವಿದ್ಯಾಲಯ, ನವದೆಹಲಿ

* ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಾಟಿಯಾಲ

ಈ ಮಾಹಿತಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಲೋಕಸಭೆಯಲ್ಲಿಂದು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

         'ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಶೌರ್ಯ ಎಲ್ಲರಿಗೂ ತಿಳಿದಿದೆ. ವಿದ್ವಾಂಸ, ಸೈನಿಕ ಮತ್ತು ರಾಜಕಾರಣಿಯಾಗಿದ್ದ ಬೋಸ್ 125ನೇ ಜಯಂತಿ ಆಚರಣೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ವಿಶೇಷ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸೋಣ'' ಎಂದು ಮೋದಿ 2020ರ ಡಿಸೆಂಬರ್ ತಿಂಗಳಲ್ಲಿ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

           ನಂತರ ರಚನೆಯಾದ ಉನ್ನತಮಟ್ಟದ ಸಮಿತಿ ಪರಾಕ್ರಮ್ ದಿವಸ್ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ವಿನ್ಯಾಸದ ಬಗ್ಗೆ ಚರ್ಚೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ತಜ್ಞರು, ಇತಿಹಾಸಕಾರರು, ಬರಹಗಾರರು, ನೇತಾಜಿ ಮತ್ತು ಐಎನ್‌ಎ ಸಹೋದ್ಯೋಗಿಗಳ ಕುಟುಂಬ ಸದಸ್ಯರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ನೀಡಿದ ಕೊಡುಗೆಗೆ ಹೇಗೆ ಗೌರವ ಸಲ್ಲಿಸುವುದು ಎಂಬುದರ ಕುರಿತು ಚರ್ಚಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries