HEALTH TIPS

ಶಿವಂಕುಟ್ಟಿ ರಾಜೀನಾಮೆಗೆ ಆಗ್ರಹಿಸಿ ಯುವ ಸಂಘಟನೆಗಳಿಂದ ಬೀದಿಗಿಳಿದು ಪ್ರತಿಭಟನೆ

            ತಿರುವನಂತಪುರ: ವಿಧಾನಸಭೆಯಲ್ಲಿ ಸಾರ್ವಜನಿಕ ಆಸ್ತಿ ನಾಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸಚಿವ ವಿ. ಶಿವನಕುಟ್ಟಿ  ರಾಜೀನಾಮೆಗೆ ಒತ್ತಾಯಿಸಿ ಸೆಕ್ರಟರಿಯೇಟ್ ಸುತ್ತಲೂ ಪ್ರತಿಭಟನೆಗಳು ಬಲಗೊಂಡಿದೆ. ಪ್ರತಿಪಕ್ಷಗಳು ಶುಕ್ರವಾರ ಕಲಾಪವನ್ನು ಬಹಿಷ್ಕರಿಸಿದ್ದವು. ವಿಧಾನಸಭೆ ಪ್ರಶ್ನೋತ್ರತರ ವೇಳೆ ಉತ್ತರಿಸಲು ಎದ್ದುನಿಂತ ಸಚಿವ ಶಿವಂಕುಟ್ಟಿ ಅವರಿಗೆ ಮಾತನಾಡಲು ಅವಕಾಶ ನೀಡದೆ ಭಾರೀ ಪ್ರತಿಭಟನೆ ವ್ಯತಜಕ್ತಪಡಿಸಲಾಯಿತು. 

         ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಸಚಿವ ಶಿವನಕುಟ್ಟಿಯವರ ಭಾಷಣಕ್ಕೆ ಹಲವು ಬಾರಿ ಅಡಚಣೆಯಾಯಿತು. ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ್ದಕ್ಕಾಗಿ ವಿಚಾರಣೆಯನ್ನು ಎದುರಿಸುತ್ತಿರುವ ಸಚಿವರ ವಿರುದ್ಧ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಿದವು. ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ಎದ್ದು ನಿಂತಾಗ 'ಗೋ ಬ್ಯಾಕ್' ಘೋಷಣೆಯೊಂದಿಗೆ ಪ್ರತಿಭಟನೆ ಭುಗಿಲೆದ್ದಿತು. ಆಸನಗಳ ಮೇಲೆ ಬ್ಯಾನರ್ ಪ್ರದರ್ಶಿಸಲಾಯಿತು. 

          ಶಿವಂಕುಟ್ಟಿಯವರು ಉತ್ರಿಸುವ ವೇಳೆ ವಿರೋಧ ಪಕ್ಷದ ಸದಸ್ಯರು ಗೈರುಹಾಜರಾಗಿದ್ದರು. ಏತನ್ಮಧ್ಯೆ, ಪ್ರಶ್ನೋತ್ತರ ಅವಧಿಯಲ್ಲಿ ಪ್ರತಿಪಕ್ಷಗಳು ಇತರ ಸಚಿವರೊಂದಿಗೆ ಸಹಕರಿಸಿದವು. ಪ್ರತಿಭಟನೆ ತೀವ್ರಗೊಂಡಾಗ, ಸ್ಪೀಕರ್ ಎಂ.ಬಿ ರಾಜೇಶ್ ಅವರು ಸದನದಲ್ಲಿ ಬ್ಯಾನರ್ ಮತ್ತು ಫಲಕಗಳನ್ನು ಪ್ರದರ್ಶಿಸುವುದು ಕಾನೂನುಬಾಹಿರ ಎಂದು ತೀರ್ಪು ನೀಡಿದರು, ಆದರೆ ಯಾರೂ ಈ ಬಗ್ಗೆ ಗಮನಿಸದೆ ಪ್ರತಿಭಟನೆ ಮುಂದುವರಿಸಿದರು. ಸಚಿವರ ರಾಜೀನಾಮೆಗೆ ಒತ್ತಾಯಿಸಿ ವಿಧಾನಸಭೆಯ ಹೊರಗೆ ನಡೆದ ಪ್ರತಿಭಟನೆ ಘರ್ಷಣೆಯಲ್ಲಿ ಅಂತ್ಯಗೊಂಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries