ಕಾಸರಗೋಡು: ಕೇಂದ್ರೀಯ ವಿಶ್ವ ವಿದ್ಯಾಲಯ ಕೇರಳ ಕಾಸರಗೋಡು ಕ್ಯಾಂಪಸ್ ಸೇರಿದಂತೆ ದೇಶದ 12 ಕೇಂದ್ರೀಯ ವಿಶ್ವ ವಿದ್ಯಾಲಯಗಳ ಇಂಟಗ್ರೇಟೆಡ್, ಪದವಿ, ಸ್ನಾತಕೋತ್ತರ ಪದವಿ, ಎಂ.ಫಿಲ್ ಕೋರ್ಸ್‍ಗಳಿಗಾಗಿ ಸಾಮಾನ್ಯ ಪ್ರವೇಶನಾ ಪರೀಕ್ಷೆ(ಸಿಯುಸಿಇಟಿ-2021)ಸೆಪ್ಟಂಬರ್ 15, 16, 23 ಹಾಗೂ 24ರಂದು ನಡೆಯಲಿದೆ.
ನ್ಯಾಶನಲ್ ಟೆಸ್ಟಿಂಗ್ ಏಜನ್ಸಿ ಸಹಕಾರದೊಂದಿಗೆ ಪಂಜಾಬ್ ಕೇಂದ್ರೀಯ ವಿಶ್ವ ವಿದ್ಯಾಲಯ ಪ್ರವೇಶನಾ ಪರೀಕ್ಷೆ ಕೋರ್ಡಿನೇಟ್ ನಡೆಸುತ್ತಿದೆ. ಸೆಪ್ಟಂಬರ್ 1ರ ವರೆಗೆ ಛಿuಛಿeಣ.ಟಿಣಚಿ.ಟಿiಛಿ.iಟಿ ಎಂಬ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿವಿಧ ರಾಜ್ಯಗಳಲ್ಲಾಗಿ 150 ಪರೀಕ್ಷಾ ಕೇಂದ್ರಗಳು ಕಾರ್ಯಾಚರಿಸಲಿದೆ. 12ಕೇಂದ್ರೀಯ ವಿಶ್ವ ವಿದ್ಯಾಲಯಗಳ 307ಸ್ನಾತಕೋತ್ತರ ಪದವಿ ಕೋರ್ಸ್‍ಗಳು, 63ಪದವಿ ಕೋರ್ಸುಗಳಿಗೆ ಪ್ರವೇಶಾತಿ ನಡೆಯಲಿದೆ.