HEALTH TIPS

ಸಮರಸ ಸುದ್ದಿ ಐದನೇ ವರ್ಷಕ್ಕೆ: ಅನಿಸಿದ್ದು, ನೆನಸಿದ್ದು: ಸಾಗಿಬಂದ ಹೆಜ್ಜೆಯ ಅವಲೋಕನ

  

                ಆಧುನಿಕ ಜಗತ್ತು ಸದಾ ಕ್ರಿಯಾಶೀಲವಾಗಿ ಹೊಸತನಗಳ ಮುಖ ದಿನ ಬೆಳಗಾದರೆ ನಮ್ಮ ಮುಖದೆದುರು ರಾರಾಜಿಸುತ್ತವೆ. ಇಂದೀಗ ಇರುವುದು ಒಂದಷ್ಟು ಬಳಿಕ ಬೇರೊಂದು ಸ್ವರೂಪದಲ್ಲಿ ನಮನ್ನು ಖಚಿತಗೊಳಿಸುವುದು ಹೌದಾದರೂ, ಅದರೊಂದಿಗೆ ಸಾಗುವ ಎದೆಗಾರಿಕೆ ನಮ್ಮಲ್ಲಿರದಿದ್ದರೆ ಸೋತು ಹೋಗುವುದಂತೂ ಖಚಿತ. ಅ|ಂದರೆ ಕಾಲದ ವೇಗದೊಂದಿಗೆ ನಮ್ಮ ತೆವಳುವಿಕೆಯನ್ನು ಕನಿಷ್ಠ ದಾಪುಗಾಲಿಗಾದರೂ ಬದಲಾಯಿಸಬೇಕೆಂಬುದು ಜಗದ ನಿಯಮ.

              ಸಮರಸ ಸುದ್ದಿ ಹುಟ್ಟಿಕೊಂಡದ್ದು ಇಂತಹದೊಂದು ಸನ್ನಿವೇಶದಲ್ಲಿ. ಹೊಸತನದ ಹುಡುಕಾಟ ಮಾಧ್ಯಮ ಕ್ಷೇತ್ರಕ್ಕೂ ಅನಿವಾರ್ಯ. ಈ ನಿಟ್ಟಿನಲ್ಲಿ 2017 ರ ಆಗಸ್ಟ್ 28 ರಂದು ಸಮರಸದ ಉದಯ ಕಾಸರಗೋಡಿನ ಬಹುಭಾಷಾ ನೆಲದಲ್ಲಿ ಆಗಿ ಯಶಸ್ವಿ ನಾಲ್ಕು ವರ್ಷಗಳನ್ನು ಪೂರೈಸಿ ಇಂದೀಗ ಐದರ ಹೆಜ್ಜೆಗೆ ಮುಂದಡಿ ಇರಿಸಿದೆ.

              ಆರಂಭದ ಮೂರು ವರ್ಷ ಕೇವಲ ಸುದ್ದಿಗಳಿಗಷ್ಟೇ ಸ|ಈಮಿತವಾಗಿತ್ತು. ಅಂದರೆ ಜಾಹೀರಾತಿಲ್ಲದೆ ಮುನ್ನಡಸಲಾಗಿತ್ತು. ಆದರೆ ಯಾವಾಗ ಕೊರೊನಾ ಹಾವಳಿ ಎದುರಾಯಿತೋ ಅಂದು ಅನಿವಾರ್ಯವಾಗಿ ಜಾಹೀರಾತಿಗೆ ದುಮುಖಲೇ ಬೇಕಾಯಿತು. ಅದೂ ಸೀಮಿತ ಮಟ್ಟದಲ್ಲಿ.

            ಜಿಲ್ಲೆ ಅಥವಾ ಸ್ಥಳೀಯ, ರಾಜ್ಯ, ದೇಶ ಮತ್ತು ಅಂತರಾಷ್ಟ್ರೀಯ ಪ್ರಮುಖ ಸುದ್ದಿಗಳು, ವಿಶೇಷ ವರ್ತಮಾನಗಳು, ದೈನಂದಿನ ಬದುಕಿನ ಸುಲಲಿತತೆಗೆ ಕಾರಣವಾಗುವ ಒಂದಷ್ಟು ಅರಿವಿನ ಮಾರ್ಗದರ್ಶಿ ಬರಹಗಳ ಮೂಲಕ ಇಂದೀಗ ಸಮರಸ ಸುದ್ದಿ ಅರ್ಧ ಲಕ್ಷದಷ್ಟು ದೈನಂದಿನ ಓದುಗರನ್ನು ಹೊಂದಿದ್ದು, ಸದಬಿರುಚಿಯ ಓದುಗರಿಂದ ಹೆಗ್ಗಳಿಕೆಗೆ ಪಾತ್ರವಾಗಿದೆ. ವ್ಯಕ್ತಿನಿಷ್ಠವಲ್ಲದ ವಸ್ತುನಿಷ್ಠ ವರದಿ, ಕಾಸರಗೋಡಿನ ದೈನಂದಿನ ಆಗುಹೋಗುಗಳು, ಗಡಿನಾಡಿನ ಸಾಧಕ ವ್ಯಕ್ತಿಗಳ ಸಾಧನಾ ಪಥ.........ಹೀಗೆ ಹಲವು ಹತ್ತು ವಿಷಯಗಳೊಂದಿಗೆ ದಿನಪೂರ್ತಿ ಓದುವಷ್ಟು ವಿಷಯಗಳ ಹಂದರದೊಂದಿಗೆ ಓದುಗರಿಗೆ ತೃಪ್ತಿತರುವ ನಿಟ್ಟಿನ ಸುದ್ದಿಗಳನ್ನು ಸಮರಸ ಸುದ್ದಿ ಸದಾ ಒದಗಿಸುತ್ತಿದೆ.  

          ಕಳೆದ ಕೋವಿಡ್ ಅಲೆಯಲ್ಲಂತೂ ಹೇರಲ್ಪಟ್ಟ ಲಾಕ್ ಡೌನ್ ಸಂದರ್ಭ ಸೋಂಕಿನ ಪ್ರತಾಪ, ಸರ್ಕಾರ ಕೈಗೊಂಡ ಪ್ರತಿರೋಧ ತಂತ್ರಗಳು, ಜನಸಾಮಾನ್ಯರು ಅನುಸರಿಸಬೇಕಾದ ಕ್ರಮಗಳು, ಬವಣೆಗಳ ಬಗ್ಗೆ ಸಮಗ್ರ ವರದಿಗಳನ್ನು ಕ್ಷಣಕ್ಷಣಕ್ಕೆ ಓದುಗರಿಗೆ ತಲಪಿಸುವ ಮೂಲಕ ಕೋವಿಡ್ ನ ಮುಂಚೂಣಿಯ ಹೋರಾಟಗಾರರಂತೆ ಸಮರಸ ಸುದ್ದಿ ದಿನದ ಬಹುತೇಕ ಹೊತ್ತು ನಿರಂತರತೆ ಕಾಪಾಡಿದ್ದು ಜನಮನವನ್ನು ಗೆಲ್ಲುವಲ್ಲಿ ಸಫಲವಾಗಿದೆ ಎಂಬುದೂ ಉಲ್ಲೇಖಾರ್ಹ. ಸಮರಸದ ಹೆಜ್ಜೆ ಲಾಭಗಳಿಕೆ ಆಗಿಲ್ಲ ಮತ್ತು ಆಗುವುದೂ ಇಲ್ಲ. ಹಾಗೆಂದು ನಿರ್ವಹಣೆ ಮತ್ತು ಸುದ್ದಿಮನೆಯ ಸರಾಗತೆಗೆ ಒಂದಷ್ಟು ಆಕ್ಸಿಜನ್ ಬೇಕೆಂಬ ನೆಲೆಯಲ್ಲಿ ಜಿಲ್ಲೆಯನೇಕ ಸಹೃದಯ ಮಹನೀಯರು ಜಾಹೀರಾತು ನೀಡುವ ಮೂಲಕ ಪ್ರೋತ್ಸಾಹಿಸಿದ್ದಾರೆ. ನಮನಗಳು.

             ಸಮರಸ ಸದಾ ಕ್ರಿಯಾಶೀಲವಾಗಲು ಕಾರಣೀಭೂತರಾದ ಮಹನೀಯರ ಪಟ್ಟಿ ಬಹುದೊಡ್ಡದು. ಅದು ಕಾಸರಗೋಡಿನೊಂದಿಗೆ ಕೇರಳದ ತಿರುವನಂತಪುರ, ತೃಶೂರ್, ಎರ್ನಾಕುಳಂ, ಕರ್ನಾಟಕದ ಮಂಗಳೂರು, ಮೈಸೂರು, ಬೆಂಗಳೂರು, ಮಹಾರಾಷ್ಟ್ರ ಆಂದ್ರ, ನವದೆಹಲಿ, ವಿದೇಶ ರಾಷ್ಟ್ರಗಳಾದ ಗಲ್ಪ್ ರಾಷ್ಟ್ರಗಳು, ಯು.ಎಸ್.ಎ. ಯು.ಕೆ ಸಹಿತ ಅನೇಕ ಕಡೆಗಳಲ್ಲಿ ಓದುಗರನ್ನು ಹೊಂದಿದೆ. ಕಾಸರಗೋಡಿನ ಆಧ್ಯಾತ್ಮಿಕ ಕೇಂದ್ರಗಳಾದ ಶ್ರೀಮದ್ ಎಡನೀರು ಮಠ, ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮ, ಜಿಲ್ಲೆಯ ಹಿರಿಯ ವೈದ್ಯ ಡಾ.ಎಸ್. ಆರ್.ನರಹರಿ, ಉಕ್ಕಿನಡ್ಕದ ಡಾ.ಜಯಗೋವಿಂದ, ಸರ್ಕಾರಿ ವೈದ್ಯರಾದ ಡಾ. ನಾರಾಯಣ ನಾಯ್ಕ್, ಕೇರಳ ತುಳು ಅಕಾಡೆಮಿ ಅಧ್ಯಕ್ಷರಾದ ಎಂ.ಉಮೇಶ ಸಾಲ್ಯಾನ್, ಮಾರ್ಗದರ್ಶಕರಾದ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಪೋಲೀಸ್ ಅಧಿಕಾರಿಗಳಾದ ಪರಮೇಶ್ವರ ನಾಯ್ಕ್, ಎಲ್ಲಾ ಪಕ್ಷಗಳ ರಾಜಕೀಯ ಪ್ರತಿನಿಧಿಗಳು, ಅಧಿಕಾರಿ ವರ್ಗ, ಕವಿ-ಕಲಾವಿದರು ಸಮರಸ ಸುದ್ದಿಗೆ ಸದಾ ಬೆಂಬಲವಾಗಿದ್ದಾರೆ. ಸಾಮಾನ್ಯ ಓದುಗರು ಕೂಡಾ.

           ಈ ಪ್ರೀತಿ, ನಂಬಿಕೆ ಹೀಗೆಯೇ ಮುಂದುವರಿಯಲಿ, ಸದಾಶಯದ ಸುದ್ದಿಗಳು ನಮ್ಮಲ್ಲಿ ವಿಜ್ರಂಬಿಸಲಿ, ಪ್ರೇರಣೆಯಾಗಲಿ ಎಂಬ ಪ್ರಾರ್ಥನೆಯೊಂದಿಗೆ...............ಇನ್ನು ಐದರ ಹೆಜ್ಜೆ

    ಅಕ್ಷತಾ ಪಿ. ಭಟ್                                                                                         ಪುರುಷೋತ್ತಮ ಭಟ್ ಕೆ             ಪ್ರಧಾನ ಸಂಪಾದಕಿ                                                                          ಕಾರ್ಯನಿರ್ವಾಹಕ ಸಂಪಾದಕ

                                                      ಧನರಾಜ್ ಐಲ.

                                                       ತಾಂತ್ರಿಕ ವ್ಯವಸ್ಥಾಪಕ


                                                                                                                                           

                                                                  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries