ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟಿನ ಸಮೀಪ ರೈಲು ಹಳಿ ದಾಟುತ್ತಿರುವ ಮಧ್ಯೆ ವೃದ್ದರೊಬ್ಬರಿಗೆ ರೈಲು ಡಿಕ್ಕಿ ಹೊಡೆದು ಇಂಜಿನ್ ಭಾಗದಲ್ಲಿ ಸಿಲುರೆದ ಮೃತ ದೇಹವನ್ನು ಕುಂಬಳೆ ತನಕ ಕೊಂಡೊಯ್ದ ಬಳಿಕ ನಿಲುಗಡೆಯಾದ ಘಟನೆ ಸೋಮವಾರ ನಡೆದಿದೆ.
ಸೋಮವಾರ ಬೆಳಿಗ್ಗೆ 11.45 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ವಾಮಂಜೂರು ನಿವಾಸಿ ಮೊಯಿದಿನ್ ಕುಂಞ (70) ಸಾವನ್ನಪ್ಪಿದ ದುರ್ದೈವಿ.
ಮಂಗಳೂರು ಭಾಗದಿಂದ ಆಗಮಿಸಿದ ಇಂಟರ್ ಸಿಟಿ ರೈಲು ಡಿಕ್ಕಿ ಹೊಡೆದು ಮೊಯಿದಿನ್ ಕುಂಞ ಸಾವನ್ನಪ್ಪಿದ್ದಾರೆ. ಊರವರು ನೀಡಿದ ಮಾಹಿತಿಯಂತೆ ಕುಂಬಳೆಯಲ್ಲಿ ರೈಲು ನಿಲುಗಡೆಗೊಳಿಸಿ ಮೃತದೇಹವನ್ನು ಹೊರ ತೆಗೆಯಲಾಯಿತು.