ಕುಂಬಳೆ: ಪ್ರಾಕೃತಿಕ ಸೌಂದರ್ಯದಿಂದ ಸಮೃದ್ಧವಾಗಿರುವ ಕಂಬಾರ್ ನದಿ ಪ್ರವಾಸೋದ್ಯಮದ ಅವಕಾಶಗಳಿಗೆ ತೆರೆದುಕೊಂಡು ಹುಡುಕಾಟದಲ್ಲಿದೆ. ಕಂಬಾರ್ ನದಿ ಮೊಗ್ರಾಲ್ ಪೂತ್ತೂರು, ಮಧೂರು, ಪುತ್ತಿಗೆ ಮತ್ತು ಕುಂಬಳೆ ಗ್ರಾಮ ಪಂಚಾಯಿತಿಗಳ ಸಂಗಮವಾಗಿದೆ. ಮೊಗ್ರಾಲ್ ನದಿಯ ಭಾಗವಾಗಿರುವ ಕಂಬಾರ್ ನದಿಯ ದಡಗಳು ಹಚ್ಚ ಹಸಿರಿನಿಂದ ಮತ್ತು ಹಳ್ಳಿಗಾಡಿನ ಸೌಂದರ್ಯದಿಂದ ಸುಂದರವಾಗಿವೆ. ಇಲ್ಲಿಂದ ಅನಂತಪುರಕ್ಕೆ ಕೇವಲ 2 ಕಿ.ಮೀ. ದೂರ. ಇದು ಚಾರಣಕ್ಕೆ ಸಂಭಾವ್ಯ ಮಾರ್ಗವಾಗಿದೆ. ನದಿ ದಂಡೆಯು ಟಾರಿಂಗ್‍ನೊಂದಿಗೆ ಉತ್ತಮ ರಸ್ತೆ ಸೌಲಭ್ಯಗಳನ್ನು ಹೊಂದಿದೆ.
ಪ್ರಸ್ತುತ, ವಿವಿಧ ಭಾಗಗಳಿಂದ ಅನೇಕ ಪ್ರವಾಸಿಗರು ನದಿಯ ಸೌಂದರ್ಯ ಆಸ್ವಾದಿಸಲು ಬರುತ್ತಾರೆ. ನದಿ ತೀರದ ಉದ್ಯಾನವನಗಳು, ರೆಸ್ಟೋರೆಂಟ್‍ಗಳು, ಬೋಟಿಂಗ್, ಜಲಕ್ರೀಡೆಗಳು, ಚಾರಣ ಮತ್ತು ಕೃಷಿ ಪ್ರವಾಸೋದ್ಯಮಗಳಿಗೆ ಡಿಟಿಪಿಸಿ(ಡಿಸ್ಟ್ರಿಕ್ಟ್ ಟೂರಿಸಂ ಪ್ರಮೋಶನ್ ಕೌನ್ಸಿಲ)ಯೋಜನೆ ರೂಪಿಸುತ್ತಿದೆ. ಡಿಟಿಪಿಸಿ ಕಾರ್ಯದರ್ಶಿ ಬಿಜು ರಾಘವನ್ ಮತ್ತು ಬಿಆರ್ ಡಿ ಸಿ ಸಹಾಯಕ ವ್ಯವಸ್ಥಾಪಕ ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿರುವರು. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಪ್ರವಾಸೋದ್ಯಮ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನಗಳನ್ನು ಆರಂಭಿಸಿದೆ. ನದಿ ಪ್ರವಾಸೋದ್ಯಮಕ್ಕಾಗಿ ಡಿಟಿಪಿಸಿ ವಿನ್ಯಾಸಗೊಳಿಸಿದ ಲಾಂಛನವನ್ನು ಕಾರ್ಯದರ್ಶಿ ಬಿಜು ರಾಘವನ್ ಬಿಡುಗಡೆ ಮಾಡಿದರು. ಪ್ರವಾಸೋದ್ಯಮ ಉಪನಿರ್ದೇಶಕ ಥಾಮಸ್ ಆಂಟನಿ, ಬಿಆರ್‍ಡಿಸಿ ಸಹಾಯಕ ವ್ಯವಸ್ಥಾಪಕ ಸುನೀಲ್ ಕುಮಾರ್, ಬೇಕಲ್ ಟೂರಿಸಂ ಪ್ರೆಟರ್ನಿಟಿ ಅಧ್ಯಕ್ಷ ಸೈಫುದ್ದೀನ್ ಕಳನಾಡ್, ಪಿ.ಎಂ.ಮುನೀರ್ ಹಾಜಿ, ಪಂಚಾಯತ್ ಉಪಾಧ್ಯಕ್ಷ ಮುಜೀಬ್ ಕಂಬಾರ್, ಹಕೀಮ್ ಕಂಬಾರ್ ಮತ್ತು ಮನ್ಸೂರ್ ಕಂಬಾರ್ ಉಪಸ್ಥಿತರಿದ್ದರು. ಲೋಗೋವನ್ನು ಖ್ಯಾತ ಡಿಸೈನರ್ ನಾಫಿದ್ ಪರವನಡ್ಕ ವಿನ್ಯಾಸಗೊಳಿಸಿದ್ದಾರೆ.