ಕೊಚ್ಚಿ: ಸ್ಮಾರ್ಟ್‍ಪೋನ್, ಕಂಪ್ಯೂಟರ್ ಇಲ್ಲದ ಕಾರಣಗಳಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ಇಲ್ಲದಂತೆ ಆಗಬಾರದು ಎಂದು ಕೇರಳ ಹೈಕೋರ್ಟ್ ಇಂದು ಎಚ್ಚರಿಸಿದೆ. ಈ ಬಗ್ಗೆ ಸರ್ಕಾರದ ಮಧ್ಯಸ್ಥಿಕೆಗೆ ಮುಖ್ಯ ಕಾರ್ಯದರ್ಶಿಯೂ, ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿಯವರ ನಿಲುವನ್ನು ತಿಳಿಸಬೇಕೆಂದು ಹೈಕೋರ್ಟ್ ಹೇಳಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಏಳು ವಿದ್ಯಾರ್ಥಿಗಳು ತÀಮ್ಮ ಹೆತ್ತವರೊಂದಿಗೆ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸಿದ್ದ ನ್ಯಾಯಾಲಯ ಹೇಳಿದೆ. ಮೊಬೈಲ್ ಪೋನ್, ಲಾಪ್ ಟೋಪ್ ಇಲ್ಲದ ಕಾರಣ ಆನ್‍ಲೈನ್ ಅಧ್ಯಯನಕ್ಕೆ ತಡೆಗಳಾಗುತ್ತಿದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಧ್ಯಸ್ಥಿಕೆ ನಡೆಸಬೇಕು ಎಂದು ಮುಖ್ಯ ಕಾರ್ಯದರ್ಶಿಯೊಂದಿಗೆ ಸಾರ್ವಜನಿಕ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ. ಆನ್‍ಲೈನ್ ಅಧ್ಯಯನ ಸೌಕರ್ಯ ಯಾರೊಬ್ಬರಿಗೂ ನಿರಾಕರಣೆಯಾಗುವ ಸನ್ನಿವೇಶ ಉಂಟಾಗಬಾರದು. ಸ್ಮಾರ್ಟ್ ಪೋನ್, ಕಂಪ್ಯೂಟರ್ ಇಲ್ಲದ ಹೆಸರಿನಲ್ಲಿ ತರಗತಿಗಳನ್ನು ವೀಕ್ಷಿಸಲಾಗದ ಸಂಕಷ್ಟಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ.