ನವದೆಹಲಿ: ಕೇರಳ ಮೂಲದ ಮಿನಿ ಐಪಿ ಭಾರತೀಯ ಜೀವ ವಿಮಾ ನಿಗಮದ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಪತ್ತನಂತಿಟ್ಟು ತಿರುವಲ್ಲ, ಮೂಲದ ಇವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಾರೆ.
ಎಲ್. ಐ ಸಿ ಇಹಾಸದಲ್ಲಿ ಮೂರನೇ ಮಹಿಳಾ ನಿರ್ದೇಶಕಿಯಾಗಿ ಮಿನಿ ಆಯ್ಕೆಗೊಂಡಿರುವರು. ಕಾರ್ಯನಿರ್ವಾಹಕ ನಿರ್ದೇಶಕರ ಸ್ಥಾನದಿಂದ ಅವರು ಅತ್ಯುನ್ನತ ಸ್ಥಾನಕ್ಕೆ ಏರಿರುವರು. ಅವರು 1996 ರಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.
ಕಾರ್ಯನಿರ್ವಾಹಕ ನಿರ್ದೇಶಕಿ, ನಿರ್ದೇಶಕಿ ಮತ್ತು ಸಿ. ಇ. ಓ., ಎಲ್. ಐ. ಸಿ ಎಚ್. ಎಫ್. ಎಲ್., ಪ್ರಾದೇಶಿಕ ಪ್ರಬಂಧಕಿ ಸಹಿತ ಎಲ್.ಐ.ಸಿಯ ವಿವಿಧ ಹುದ್ದೆಗಳಲ್ಲಿ ಮಿನಿ ಐಪಿ ಈ ವರೆಗೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರು ಆಂಧ್ರ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೊಲ್ಲಂ ಮೂಲದ ನಿವೃತ್ತ ಕಮಾಂಡರ್ ಕೆ.ಕೆ. ಐಫ್ ಮಿನಿ ಅವರ ಪತಿ. ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.