ಕೊಲ್ಲಂ: ಕೊರೊನಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಲ್ಲಂ ಜಿಲ್ಲೆಯ ಪುನಲೂರಿನಲ್ಲಿ ಈ ಘಟನೆ ನಡೆದಿದೆ. ತೊಲಿಕೋಡು ಮೂಲದ ಸಜಿಕುಮಾರ್ ಮತ್ತು ರಾಜಿ ಅವರ ಪುತ್ರ ವಿಶ್ವ ಕುಮಾರ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಸಹೋದರ ಕೊರೋನಾ ಸೋಂಕಿಗೆ ಒಳಗಾದ ಬಳಿಕ ವಿಶ್ವ ಕುಮಾರ್ ತೀವ್ರ ಘಾಸಿಗೊಂಡಿದ್ದರು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ವಿಶ್ವ ಕುಮಾರ್ ತೀವ್ರ ಮಾನಸಿಕ ಒತ್ತಡದಲ್ಲಿ ಸಿಲುಕಿ ಭೀತಿಗೊಂಡಿದ್ದ ಎಂದು ಸಂಬಂಧಿಕರು ಹೇಳಿದ್ದಾರೆ. ಕೊರೋನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸುವ ಆತ್ಮಹತ್ಯಾ ಪತ್ರವೊಂದನ್ನೂ ಪತ್ತೆಹಚ್ಚಲಾಗಿದೆ.