ಕಾಸರಗೋಡು: ರೆಡ್‍ಕ್ರಾಸ್ ಸಂಸ್ಥೆಯ ಕಾಸರಗೋಡು ಜಿಲ್ಲಾ ಘಟಕ ಟಾಟಾ ಕೋವಿಡ್ ಆಸ್ಪತ್ರೆಗೆ ಮೂರು ಲಕ್ಷ ರೂ. ಮೌಲ್ಯದ ಎರಡು ವೆಂಟಿಲೇಟರ್ ಕೊಡುಗೆಯಾಘಿ ನೀಡಿದ್ದು, ಹಸ್ತಾಂತರ ಸಮಾರಂಭ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಸಮಾರಂಭ ಉದ್ಘಾಟಿಸಿ, ವೆಂಟಿಲೇಟರ್‍ಗಳನ್ನು ಆಸ್ಪತ್ರೆ ಮೇಲ್ವಿಚಾರಕಿ ಡಾ. ಗೀತಾಗುರುದಾಸ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮುಖ್ಯಮಂತ್ರಿಯ ವಿಪತ್ತು ನಿರ್ವಹಣಾ ನಿಧಿಗೆ ಜ್ಯೂನಿಯರ್ ರೆಡ್‍ಕ್ರಾಸ್ ಸೊಸೈಟಿ ಕೊಡುಗೆಯಾಗಿ ನೀಡಿದ 30ಸಾವಿರ ರೂ. ಮೊತ್ತವನ್ನು ಕೋರ್ಡಿನೇಟರ್ ಕೆ. ಅನಿಲ್ ಕುಮಾರ್ ಹಸ್ತಾಂತರಿಸಿದರು.ರೆಡ್‍ಕ್ರಾಸ್ ರಾಜ್ಯ ಸಮಿತಿ ಕೋಶಾಧಿಕಾರಿ ಎಚ್.ಎಸ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ. ವಇನೋದ್, ಆರ್‍ಎಂಓ ಡಾ. ಶರಣ್ಯ, ಎಚ್.ಕೆ ಮೋಹನ್‍ದಾಸ್, ಎನ್. ಸುರೇಶ್, ಕೆ.ರಾಧಾಕೃಷ್ಣನ್ ಉಪಸ್ಥಿತರಿದ್ದರು.