ಕಾಸರಗೋಡು: ಕೇರಳ ಸರ್ಕಾರ ಓಣಂ ಹಬ್ಬದ ಅಂಗವಾಗಿ ವಿತರಿಸುತ್ತಿರುವ ಆಹಾರ ಸಾಮಗ್ರಿ ಕಿಟ್ ಎಲ್ಲ ಕಾರ್ಡುದಾರರಿಗೆ ಓಣಂ ಮುಂಚಿತವಾಗಿ ಪೂರೈಸಲು ಸಾಧ್ಯವಾಗದಿರುವುದರಿಂದ ಕಿಟ್ ಲಭಿಸಲು ಬಾಕಿಯಿರುವ ಕಾರ್ಡುದಾರರಲ್ಲಿ ನಿರಾಸೆಯುಂಟಾಗಿದೆ.
ಕೇರಳದಲ್ಲಿ 90.67ಲಕ್ಷ ಕಾರ್ಡುದಾರರಿಗೆ ಕಿಟ್ ವಿತರಿಸುವುದಾಗಿ ಸರ್ಕಾರ ಘೋಷಿಸಿದ್ದು, ಓಣಂಗೆ ಮುಂಚಿತವಾಗಿ 60.60ಮಂದಿಗಷ್ಟೆ ಕಿಟ್ ವಿತರಣೆ ಸಾಧ್ಯವಾಗಿದೆ. ಇನ್ನೂ 30ಲಕ್ಷದಷ್ಟು ಕಾರ್ಡುದಾರರು ಕಿಟ್ ಲಭಿಸಲು ಬಾಕಿಯಿದ್ದಾರೆ. ಶನಿವಾರದಿಂದ ಸೋಮವಾರ ವರೆಗೆ ಸರ್ಕಾರಿ ರಜೆಯಿರುವುದರಿಂದ ಆ. 24ರ ನಂತರವಷ್ಟೆ ರೇಶನ್ ಅಂಗಡಿಗಳು ತೆರೆದು ಕಾರ್ಯಾಚರಿಸಲಿದೆ. ಓಣಂ ಕಳೆದ ನಂತರವೂ ಕಿಟ್ ವಿತರಣೆ ನಡೆಯಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.