ನವದೆಹಲಿ: ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಐಸಿಎಂಆರ್ ನಡೆಸಿರುವ ಅಧ್ಯಯನದಲ್ಲಿ ಮಹತ್ವದ ಅಂಶ ಬಹಿರಂಗಗೊಂಡಿದೆ. 98 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಪೈಕಿ 18 ಮಂದಿ ಪ್ರಮಾದವಶಾತ್ ಎರಡೂ ಭಿನ್ನ ಡೋಸ್ ಗಳ ಲಸಿಕೆಯನ್ನು ಪಡೆದುಕೊಂಡಿದ್ದರು.
ಉತ್ತರ ಪ್ರದೇಶದಲ್ಲಿ ಮೊದಲ ಡೋಸ್ ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡು ಎರಡನೇ ಡೋಸ್ ನಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದರು. ಈ ರೀತಿ ಪ್ರಮಾದವಶಾತ್ ಎರಡೂ ಭಿನ್ನ ಡೋಸ್ ಗಳನ್ನು ಪಡೆದವರಲ್ಲಿ ಎರಡೂ ಡೋಸ್ ಗಳಲ್ಲಿ ಒಂದೇ ಲಸಿಕೆ ಪಡೆದುಕೊಂಡವರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಪತ್ತೆಯಾಗಿದೆ.
ಉತ್ತರ ಪ್ರದೇಶದಲ್ಲಿ ಸೆರೆಂಡಿಪಿಟಸ್ ಕೋವಿಡ್-19 ಲಸಿಕೆ ಮಿಶ್ರಣ: ಹೆಟೆರೊಲೊಗಸ್ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಮೌಲ್ಯಮಾಪನದ ವರದಿಯನ್ನು medRxiv ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಇನ್ನಷ್ಟೇ ಪರಿಶೀಲನೆಗೊಳಪಡಬೇಕಿದೆ.
"ವೈವಿಧ್ಯಮಯ ಪ್ರೈಮ್-ಬೂಸ್ಟ್ ಲಸಿಕೆಯ ಪರಿಣಾಮಗಳ ಬಗ್ಗೆ ಇದೇ ಮೊದಲ ಬಾರಿಗೆ ಅಧ್ಯಯನ ನಡೆಸಲಾಗಿದೆ". ಎಂದು ಸಂಶೋಧಕರು ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್-19 ಲಸಿಕೆಯ ಅಭಿಯಾನದಲ್ಲಿ ಅಡೆನೊವೈರಸ್ ವೆಕ್ಟರ್ ಆಧಾರಿತ ಲಸಿಕೆ ಕೋವಿಶೀಲ್ಡ್ ಹಾಗೂ ನಿಷ್ಕ್ರಿಯಗೊಂಡ ಸಂಪೂರ್ಣ ವೈರಿಯನ್ BBV152 ಕೋವ್ಯಾಕ್ಸಿನ್ ಬಳಕೆ ಮಾಡಲಾಗಿತ್ತು ಹಾಗೂ ಏಕರೂಪದ ಪ್ರಧಾನ-ವರ್ಧಕ ವಿಧಾನವನ್ನು ಅನುಸರಿಸಲಾಗಿತ್ತು.
ಆದರೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ಪ್ರಮಾದವಶಾತ್ ಮೊದಲ ಡೋಸ್ ನಲ್ಲಿ ಕೋವಿಶೀಲ್ಡ್ ಲಸಿಕೆ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಎರಡನೇ ಲಸಿಕೆಯನ್ನು ಪಡೆದಿದ್ದರು. ಈ ವೇಳೆಗೆ ರಾಷ್ಟ್ರೀಯ ಮಟ್ಟದ ಲಸಿಕೆ ಅಭಿಯಾನ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿತ್ತು. ಮಿಶ್ರಿತ ಲಸಿಕೆಯನ್ನು ಪಡೆದಿದ್ದರಿಂದ ಮೊದಲೇ ಲಸಿಕೆ ಕುರಿತ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಐಸಿಎಂಆರ್ ಅಧ್ಯಯನ ನಡೆಸಿದೆ.