ಕುಂಬಳೆ: ಕುಂಬಳೆಯ ಸಾಮಾಜಿಕ-ಸಾಂಸ್ಕøತಿಕ ಸಂಘಟನೆಯಾದ ಸ್ಪಂಧನ ತಂಡದ ನೇತೃತ್ವದಲ್ಲಿ ಸೋಮವಾರ ಶ್ರೀನಾರಾಯಣಗುರು ಜಯಂತಿ, ಓಣಂ ಆಚರಣೆ ಮತ್ತು ಕುಂಬಳೆ ಆರಿಕ್ಕಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕೋವಿಡ್ ಮುಂಚೂಣಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸ್ಪಂಧನ ಕುಂಬಳೆಯ ಅಧ್ಯಕ್ಷ ಕೃಷ್ಣ ಗಟ್ಟಿ ಚಿರಂಜೀವಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ದಿವಾಕರ ರೈ ಉದ್ಘಾಟಿಸಿದರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ವಿಜಯನ್ ಮಾಸ್ತರ್, ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯೆ ಗಿರಿಜಾ ತಾರಾನಾಥ್, ಸೊಂಧನದ ಸಂಚಾಲಕ ಕೆ.ಸಿ.ಮೋಹನ, ಆರಿಕ್ಕಾಡಿ ಆರೋಗ್ಯ ಕೇಂದ್ರದ ಕುಂಞÁಮಿ, ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಪೂಜಾರಿ, ಕಾರ್ಯದರ್ಶಿ ರವಿ ಪೂಜಾರಿ, ನಿಝಾರ್ ಕುಂಬಳೆ, ಮೊಹಮ್ಮದ್ ಕುಂಞÂ ಉಪಸ್ಥಿತರಿದ್ದರು. ಕೋವಿಡ್ ಸಂಕಷ್ಟದ ವೇಳೆ ಮುಂಚೂಣಿಯ ಕಾರ್ಯಕರ್ತರಾಗಿ ಸೇವೆಗೈದ ಆರಿಕ್ಕಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಆನ್ ಲೈನ್
ಹೂವಿನ ರಂಗೋಲಿ ಸ್ಪರ್ಧಾ ವಿಜೇತರಿಗೆ ಪ್ರಸಾದ್ ಎಚ್. ಬಹುಮಾನಗಳನ್ನು ವಿತರಿಸಿದರು. ಲಲ್ಷ್ಮಣ ಪ್ರಭು ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವಿರಾಜ್ ಶೆಟ್ಟಿ ಸ್ವಾಗತಿಸಿ, ತಾಜುದ್ದೀನ್ ಮೊಗ್ರಾಲ್ ವಂದಿಸಿದರು. ನ್ಯಾಯವಾದಿ ಉದಯಕುಮಾರ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಓಣಂ ಔತಣ ಕೂಟ ನಡೆಯಿತು.