ಮುಳ್ಳೇರಿಯ: ಪ್ಲಸ್ಟು(science)ಪರೀಕ್ಷೆಯಲ್ಲಿ ಪೂರ್ಣ (1200ರಲ್ಲಿ 1200) ಅಂಕಗಳನ್ನು ಪಡೆಯುವ ಮೂಲಕ ಬೋವಿಕ್ಕಾನ ಬಿಎಆರ್‍ಎಚ್‍ಎಸ್ ಶಾಲೆಯ ವಿದ್ಯಾರ್ಥಿನಿ ಸುಪ್ರೀತ.ಪಿ.ಎಸ್. ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಕುಂಟಾರು ಸಮೀಪದ ಪಾರೆತ್ತೋಡು ನಿವಾಸಿ ಮುಳ್ಳೇರಿಯ ಜಿವಿಎಚ್‍ಎಸ್ ಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಮತ್ತು ವತ್ಸಲ ದಂಪತಿ ಪುತ್ರಿ. ಕಾಂಞಂಗಾಡಿನಲ್ಲಿ ನಡೆದ ರಾಜ್ಯ ಮಟ್ಟದ ಹೈಯರ್ ಸೆಕೆಂಡರೀ ವಿಭಾಗದ ವಯೊಲಿನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಈಕೆ ಉತ್ತಮ ಗಾಯಕಳೂ ಆಗಿದ್ದಾಳೆ. ಇನ್ನು ಮುಂದೆ ಎಂಎಸ್‍ಸಿ ಇಡಿ ಅಥವಾ ಬಿಬಿಸಿ(ಬೋಟನಿ ಬಯೋ ಟೆಕ್ನೋಲಜಿ ಮತ್ತು ಕೆಮೆಸ್ಟ್ರಿ) ಪದವಿ ವ್ಯಾಸಂಗ ಮಾಡುವ ಉದ್ಧೇಶವನ್ನು ಹೊಂದಿದ್ದಾಳೆ.