ಮುಳ್ಳೇರಿಯ: ಕುಂಬ್ಡಾಜೆ ಗ್ರಾಮ ಪಂಚಾಯಿತಿ 8 ನೇ ವಾರ್ಡು ಬೆಳ್ಳಿಗೆ ಅಂಗನವಾಡಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ವಾರ್ಡು ಸದಸ್ಯೆ ಸುನಿತಾ ಧ್ವಜಾರೋಹಣಗೈದರು. ಎಯಲ್‍ಯಂಯಸ್ ಸದಸ್ಯ ಗಣೇಶ್ ಬಿ, ರಾಜೇಂದ್ರ, ಸುಧಾಕರ ಬೆಳ್ಳಿಗೆ, ಅಶೋಕ ಬೆಳ್ಳಿಗೆ, ಸುಧಾಕರ ಬಲೆಕ್ಕಳ, ಅಗಲ್ಪಾಡಿ ಶಾಲಾ ಅಧ್ಯಾಪಕ ನಿತ್ಯಾನಂದ ಭಟ್ ಹಾಗೂ ಇತರರು ಉಪಸ್ಥಿತರಿದ್ದರು. ಇದೇ ಸಂದಭರ್Àದಲ್ಲಿ 2020-21ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕ ಗಳಿಸಿದ ತ್ರೆಸಾ ಮರಿಯಾ, ಫೆಬಿನ್, ನಿಯಾಜೋಸ್ ಅವರನ್ನು ಅಭಿನಂದಿಸಲಾಯಿತು. ಅಂಗನವಾಡಿ ಅಧ್ಯಾಪಿಕೆ ಪದ್ಮಿನಿ ಸ್ವಾಗತಿಸಿ, ಸಹಾಯಕಿ ಇಂದಿರಾ ವಂದಿಸಿದರು.