ಕುಂಬಳೆ :ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ವತಿಯಿಂದ ಕುಂಬಳೆ ಪಂಚಾಯತಿ ಬಿಜೆಪಿ ಮಾಜಿ ಅಧ್ಯಕ್ಷ, ಮಾಜಿ ಪಂಚಾಯತಿ ಸದಸ್ಯ ಸ್ವರ್ಗಿಯ ಇಂದುಶೇಖರ್ ಆಳ್ವ ಅವರ 6 ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಕ್ಷದ ಕಛೇರಿಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಪಂಚಾಯತಿ ಸಮಿತಿ ಅಧ್ಯಕ್ಷ ಕೆ ಸುಧಾಕರ ಕಾಮತ್ ವಹಿಸಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಂಡಲ ಕಾರ್ಯದರ್ಶಿ ರಮೇಶ್ ಭಟ್, ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬ್ಳೆ, ಕುಂಬಳೆ ಪಂಚಾಯತಿ ಅರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾವತಿ,ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆರಿಕ್ಕಾಡಿ, ಬಿಜೆಪಿ ಪಂಚಾಯತಿ ಉಪಾಧ್ಯಕ್ಷ ರಾಜೇಶ್ ಬಂಬ್ರಾಣ, ಮಹೇಶ್ ಪುಣಿಯೂರ್, ಪಂಚಾಯತಿ ಸದಸ್ಯರಾದ ಪುಷ್ಪಲತಾ ಕಾಜೂರ್,ವಿದ್ಯಾ ಏನ್. ಪೈ, ಯುವಮೋರ್ಚಾ ಕುಂಬಳೆ ಪಂಚಾಯತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಂಬ್ರಾಣ ಕಾರ್ಯಕರ್ತರಾದ ಶರತ್ ಶೆಟ್ಟಿ ಹಾಗೂ ಸುಬ್ರಹ್ಮಣ್ಯ ನಾಯಕ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಶ್ ನಾೈಕಾಪು ಸ್ವಾಗತಿಸಿ, ಪಂಚಾಯತಿ ಕಾರ್ಯದರ್ಶಿ ಸುಜಿತ್ ರೈ ವಂದಿಸಿದರು.