ಕುಂಬಳೆ : ಬಿಜೆಪಿ ಹಿರಿಯ ನೇತಾರೆ, ಮಾಜಿ ಕೇಂದ್ರ ವಿದೇಶಾಂಗ ಸಚಿವೆ ಹಾಗೂ ಪದ್ಮ ವಿಭೂಷಣ ಪುರಸ್ಕøತೆ ದಿ.ಸುಷ್ಮಾ ಸ್ವಾರಾಜ್ ಅವರ ಪುಣ್ಯ ತಿಥಿಯನ್ನು ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ವತಿಯಿಂದ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಪಕ್ಷದ ಕಚೇರಿಯಲ್ಲಿ ಗೌರವ ನಮನಗಳನ್ನು ಸಲ್ಲಿಸಿ ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕುಂಬಳೆ ಘಟಕಾಧ್ಯಕ್ಷ ಕೆ. ಸುಧಾಕರ್ ಕಾಮತ್ ಅವರು ವಹಿಸಿದರು. ಕಾರ್ಯಕ್ರಮದಲ್ಲಿ ಮಂಡಲ ಕಾರ್ಯದರ್ಶಿ ರಮೇಶ್ ಭಟ್, ಪಂಚಾಯತಿ ಸಮಿತಿ ಉಪಾಧ್ಯಕ್ಷ ಮಹೇಶ್ ಪುಣಿಯೂರ್,ಕುಂಬಳೆ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಲತಾ ಎಸ್, ಅರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾವತಿ, ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬಳೆ, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆರಿಕ್ಕಾಡಿ, ಪಂಚಾಯತಿ ಸದಸ್ಯ ವಿವೇಕಾನಂದ, ಮೋಹನ ಕೆ, ಅಜಯ, ಪುಷ್ಪಲತಾ, ಸುಲೋಚನಾ, ಶೋಭಾ ಉಪಸ್ಥಿತರಿದ್ದರು. ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾೈಕಾಪು ಸ್ವಾಗತಿಸಿ, ಪಂಚಾಯತಿ ಘಟಕ ಕಾರ್ಯದರ್ಶಿ ಸುಜಿತ್ ರೈ ವಂದಿಸಿದರು.