HEALTH TIPS

ಮೊಬೈಲ್ ರೇಂಜ್ ಗೆ ಮರವೇರಿ ಬಿದ್ದು ಬೆನ್ನುಮೂಳೆ ಘಾಸಿ: ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದ ಮಾನವ ಹಕ್ಕು ಆಯೋಗ

                                               

              ಕಣ್ಣೂರು: ನೆಟ್‍ವರ್ಕ್ ಪಡೆಯಲು ಮೊಬೈಲ್‍ನೊಂದಿಗೆ ಮರವನ್ನೇರಿದ ವಿದ್ಯಾರ್ಥಿ ಬಿದ್ದು ಬೆನ್ನುಮೂಳೆಗೆ ಗಂಭೀರವಾಗಿ ಗಾಯಗೊಂಡ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿದೆ. ಚಿತ್ತಾರಿಪರಂಬು ಕನ್ನವಂ ಅರಣ್ಯ ಪ್ರದೇಶದ ಕಾಲನಿಯಲ್ಲಿ ಅನಂತು ಬಾಬು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ಘಟನೆಯನ್ನು ಗಂಭೀರ ಸಾಮಾಜಿಕ ಸಮಸ್ಯೆಯೆಂದು ಪರಿಗಣಿಸಿದೆ.

                       ಘಟನೆಯ ವಿವರಗಳನ್ನು ತನಿಖೆ ಮಾಡಲು ಮತ್ತು ಮಾಹಿತಿ ನೀಡಲು ಆದೇಶಿಸಲಾಗಿದೆ. ಆಯೋಗದ ನ್ಯಾಯಾಂಗ ಸದಸ್ಯ ಕೆ. ಬೈಜುನಾಥನ್ ಅವರು ಕಣ್ಣೂರು ಜಿಲ್ಲಾಧಿಕಾರಿಗೆ 15 ದಿನಗಳ ಒಳಗೆ ನೇರ ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿರುವರು.   ಘಟನೆಗೆ ಸಂಬಂಧಿಸಿದಂತೆ ಚಿತ್ತಾರಿಪರಂಬು ಕನ್ನವಂ ಅರಣ್ಯ ಪ್ರದೇಶದ ಪನ್ನೋಡು ಆದಿವಾಸಿ ಕಾಲನಿಯ ಶೋಚನೀಯ ಸ್ಥಿತಿಯೂ ಬೆಳಕಿಗೆ ಬಂದಿದೆ. ಈ ಮೊದಲು ಇದೇ ರೀತಿಯಲ್ಲಿ ಮಗುವೊಂದು ಬಿದ್ದು ಆತನ ಕಾಲಿಗೆ ಗಾಯವಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ.

                   ನೂರಾರು ವಿದ್ಯಾರ್ಥಿಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಮೊಬೈಲ್ ರೇಂಜ್  ಕೊರತೆಯು ಮಕ್ಕಳ ಕಲಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಕಳೆದ ವರ್ಷ 70 ಕ್ಕೂ ಹೆಚ್ಚು ಮಕ್ಕಳು ಶಾಲೆ ಬಿಟ್ಟಿದ್ದಾರೆ. ಮಕ್ಕಳು ಕೂಡ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ಮಕ್ಕಳು ಆನ್‍ಲೈನ್ ತರಗತಿಗಳಿಗೆ ಮರಗಳ ಮೇಲೆ ಅಥವಾ ಬಾಲ್ಕನಿಗಳಲ್ಲಿ ಕುಳಿತುಕೊಳ್ಳುತ್ತಾರೆ. ಮಾನವ ಹಕ್ಕುಗಳ ಆಯೋಗದ ಪ್ರಕಾರ, ಹುಡುಗಿಯರು ಸೇರಿದಂತೆ ಅನೇಕ ಜನರು ಬಾಲ್ಕನಿಯಲ್ಲಿ ಅಧ್ಯಯನ ಮಾಡಬೇಕಾದ ಪರಿಸ್ಥಿತಿ ಅತ್ಯಂತ ಕೆಟ್ಟ ಸಾಮಾಜಿಕ ಪರಿಸ್ಥಿತಿಯನ್ನು ಬಹಿರಂಗಪಡಿಸುತ್ತದೆ.

                   ನಿನ್ನೆ ಮಧ್ಯಾಹ್ನ ಕೂತುಪರಂಬು ಕ್ಷೇತ್ರದ ಚಿತ್ತಾರಿಪರಂಬು ಪಂಚಾಯತ್ ನ ಕನ್ನವಂ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಬುಡಕಟ್ಟು ಕಾಲನಿಯಲ್ಲಿ 10 ನೇ ತರಗತಿ ತೇರ್ಗಡೆಗೊಂಡ ಬಾಲಕಿಯೊಬ್ಬಳ ಪ್ಲಸ್ ವನ್ ಪ್ರವೇಶಾತಿ ಅಲೋಟ್ಮೆಂಟ್ ತಿಳಿಯಲು ಆನ್ ಲೈನ್ ಗಮನಿಸಲು ಆಕೆಯ ಸಹೋದರ ಅನಂತು ಬಾಬು ಮರ ಹತ್ತಿದ್ದರು. ಬಳಿಕ ಆಯತಪ್ಪಿ ಬಿದ್ದ ಅನಂತು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು ಮಾಧ್ಯಮಗಳ ಮೂಲಕ ರಾಜ್ಯಾದ್ಯಂತ ಸುದ್ದಿಯಾಯಿತು. ಕಾಲನಿಯಲ್ಲಿನ ಅಧ್ಯಯನ ಸೌಲಭ್ಯಗಳ ಅಸಮರ್ಪಕತೆಯ ಬಗ್ಗೆ ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಕಾಲನಿ ನಿವಾಸಿಗಳು ಅವಲತ್ತುಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries