ಕೋಯಿಕ್ಕೋಡ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವರು. ಕೇರಳವು ಭಯೋತ್ಪಾದಕ ಸಂಘಟನೆಗಳ ಸ್ವರ್ಗವಾಗಿ ಮಾರ್ಪಟ್ಟಿದೆ. ಇಲ್ಲಿ ಪೋಲೀಸರು ಮೂಕ ಸಾಕ್ಷಿಯಾಗಿದ್ದಾರೆ ಮತ್ತು ಪ್ರಕರಣ ದಾಖಲಿಸುವಾಗಲೂ ರಾಜಕೀಯವನ್ನು ನೋಡಲಾಗುತ್ತಿದೆ ಎಂದು ಆರೋಪಿಸಿದರು. ಕೋಝಿಕೋಡ್ ನಲ್ಲಿ ಮಂಗಳವಾರ ಮಾರಾರ್ಜಿ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಕೇರಳದಲ್ಲಿ ಸಮರ್ಪಕ ಅಭಿವೃದ್ಧಿ ನೀಡುತ್ತಿಲ್ಲ ಎಂದು ಎಲ್.ಡಿ.ಎಫ್ ಟೀಕಿಸುತ್ತಿದೆ. ಕೇರಳ ಋಣಾತ್ಮಕ ವಿಧಾನವನ್ನು ಅನುಸರಿಸುತ್ತಿದೆ. ಕೇಂದ್ರ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಕೇಂದ್ರ ಸರ್ಕಾರವು ಸಹಾಯ ಮಾಡಲು ಪ್ರಯತ್ನಿಸುತ್ತಿದೆ, ಆದರೆ ರಾಜ್ಯ ಸರ್ಕಾರವು ಹೊಸ ಕೈಗಾರಿಕೆಗಳನ್ನು ತರುವಲ್ಲಿ ಎದುರು ನಿಲ್ಲುತ್ತಿದ್ದು, ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲೂ ಲೋಪ ವೆಸಗಿದೆ ಎಂದು ಅವರು ದೂಷಿಸಿದರು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಎಂ ಕಚೇರಿ ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ಕೂಡ ಇಂತಹ ಆರೋಪಗಳನ್ನು ಎದುರಿಸುತ್ತಿರುವುದು ಖಂಡನಾರ್ಹ. ಆರೋಗ್ಯ ವಲಯದ ಪ್ರಸ್ತುತ ಪರಿಸ್ಥಿತಿಯು ಕೇರಳ ಎಂದಿಗೂ ಮಾದರಿಯಲ್ಲ. ಅದು ಅವ್ಯವಸ್ಥೆ ಮತ್ತು ಅವನತಿಯ ಮಾದರಿಯಾಗಿದೆ ಎಂದು ಆರೋಪಿಸಿದರು. ಕೇರಳವು ಐಎಸ್ ನೇಮಕಾತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಅವರು ದೂಷಿಸಿದರು. ಮಕ್ಕಳು ಮತ್ತು ಮಹಿಳೆಯರಿಗೆ ಸುರಕ್ಷಿತತೆ ಇಲ್ಲವಾಗಿದೆ. ಪೋಲೀಸರು ಪ್ರಕರಣಗಳನ್ನು ದಾಖಲಿಸುವುದು ಕೂಡ ರಾಜಕೀಯವನ್ನು ನೋಡಿ ಎಂದು ಅವರು ಹೇಳಿದರು.