ಕೃಷ್ಣನೆಡೆಗೆ ಭಕ್ತಿಗಿಂತಲೂ ಸದರವೇ ಹೆಚ್ಚು ಸದರಕ್ಕೆ ಒಗ್ಗುವ ವೈವಿದ್ಯತೆಯುಳ್ಳ ದೇವರು ಆತ. ಹದಿಯರಿಗೆ ಇನಿಯ, ಕಿರಿಯರಿಗೆ ಸಖ, ಮಕ್ಕಳಿಗೆ ಆಪ್ತ, ತಾಯಂದಿರಿಗೆ ತುಂಟ ಮಗ, ಶ್ರಮಿಕರಿಗೆ ಕರ್ಮಪಾಠ ಹೇಳುವ ವೇದಾಂತಿ, ಹಿರಿಯರಿಗೆ ಜಗದ್ಗುರು. ಎಳವೆಯವರಿಂದ ಹಿರಿಯರ ವರೆಗೂ ಅವರಿವರಿಗೆ ಮನಸ್ಥಿತಿಗೆ, ಭಕ್ತಿಯ ರೂಪಕ್ಕೆ ತಕ್ಕಂತೆ ಒಗ್ಗುವ ವೈವಿದ್ಯಮಯ ದೇವ ಶ್ರೀಕೃಷ್ಣ.
ಸಕಲ ಜೀವರಾಶಿಗಳಿಗೆ ಚೈತನ್ಯ ಹುಟ್ಟಿಸುವ, ಹುಟ್ಟಿನಿಂದ ಸಾವಿನ ವರೆಗೆಯೂ ಜೀವನ ಮೌಲ್ಯವನ್ನು ಕತೆಗಳ ಮೂಲಕ ಸ್ಫುರಿಸುತ್ತಿರುವ ಶ್ರೀಕೃಷ್ಣನ ಹುಟ್ಟುಹಬ್ಬ ಇಂದು. ಕೃಷ್ಣನ ಬಗ್ಗೆ ಹೆಚ್ಚು ಜನರಿಗೆ ತಿಳಿಯದ ಕೆಲವು ಅಪರೂಪದ ವಿಷಯಗಳನ್ನು ಇಲ್ಲಿ ನೀಡಲಾಗಿದೆ.
ಶ್ರೀಕೃಷ್ಣನಿಗೆ ಬರೋಬ್ಬರಿ 108 ಹೆಸರುಗಳಿವೆ. ಹೆಚ್ಚು ಖ್ಯಾತಿ ಮತ್ತು ಹೆಚ್ಚು ಭಾಗಗಳಲ್ಲಿ ಬಳಸುವ ಹೆಸರುಗಳು, ಕೃಷ್ಣ, ಗೋಪಾಲ, ಮೋಹನ, ಘನಶ್ಯಾಮ, ದೇವಕಿನಂದ, ಕಿಶೋರ, ಗಿರಿಧರ, ಬಾನಕಿ ಬಿಹಾರಿ ಇನ್ನೂ ಕೆಲವು ಹೆಚ್ಚು ಪ್ರಸಿದ್ಧಿ. ಶ್ರಿಕೃಷ್ಣನಿಗೆ 16,108 ಮಡದಿಯರಿದ್ದಾರೆ. ಇವರಲ್ಲಿ ಎಂಟು ಮಂದಿ ಮಡದಿಯರು ಮಾತ್ರ ಎಲ್ಲರಿಗೂ ತಿಳಿದಿರುವ ಹೆಂಡತಿಯರು. ಅಥವಾ ಕೃಷ್ಣ ವರಿಸಿದ ಹೆಂಡತಿಯರೆನ್ನಬಹುದು ಇವರನ್ನು 'ಅಷ್ಟಬಾರ್ಯ' ಎಂದೂ ಕರೆಯುತ್ತಾರೆ. ರುಕ್ಮಿಣಿ, ಸತ್ಯಭಾಮಾ, ಜಾಂಬವತಿ, ನಗ್ನಜಿತಿ, ಕಳಿಂದಿ, ಮಿತ್ರವಿಂದ, ಭದ್ರಾ, ಲಕ್ಷ್ಮಣ ಇವರುಗಳೇ ಕೃಷ್ಣನ ಅಧಿಕೃತ ಪತ್ನಿಯರು. ರಾಧೆ-ಕೃಷ್ಣರು ಪ್ರೇಮಿಸಿದ್ದರಾದರೂ ಅವರು ಮದುವೆಯಾಗಲಿಲ್ಲ. ಕೃಷ್ಣನ ವಂಶ ನಿರ್ವಂಶವಾಗಲು ಗಾಂಧಾರಿ ಕಾರಣ ಭಗವಾನ್ ಶ್ರೀ ಕೃಷ್ಣನಿಗೂ ಮಹಾಭಾರತದಲ್ಲಿ ಸಾವು ಬರುತ್ತದೆ. ಅಷ್ಟೆ ಅಲ್ಲ ಆತನ ಯದುಕುಲ ನಿರ್ವಂಶವಾಗುತ್ತದೆ. ಇದೆಲ್ಲಾ ಆಗುವುದು ಗಾಂಧಾರಿಯ ಶಾಪದಿಂದ. ಕುರುಕ್ಷೇತ್ರ ಮುಗಿದ ನಂತರ ನೂರು ಜನ ಮಕ್ಕಳನ್ನೂ ಕಳೆದುಕೊಂಡ ಗಾಂಧಾರಿಯನ್ನು ಭೇಟಿಯಾಗಲು ಕೃಷ್ಣ ತೆರಳುತ್ತಾನೆ. ಆಗ ನೊಂದಿದ್ದ ಗಾಂಧಾರಿಯು ನಿನ್ನ ವಂಶ 36 ವರ್ಷದಲ್ಲಿ ಸರ್ವನಾಶವಾಗಲಿ ಎಂದು ಶಾಪ ಹಾಕುತ್ತಾಳೆ. ಅದಾಗಲೇ ಧರ್ಮದ ದಾರಿ ಬಿಟ್ಟಿದ್ದ ಯದುವಂಶ ನಾಶವಾಗುವುದೇ ಒಳ್ಳೆಯದೆಂದು ನಿರ್ಧರಿಸಿದ್ದ ಕೃಷ್ಣ ತಥಾಸ್ತು ಎನ್ನುತ್ತಾನೆ.
ಕೃಷ್ಣನ ಬಣ್ಣ ನೀಲಿಯಲ್ಲ ಕಪ್ಪು! ಎಲ್ಲರೂ ಚಿತ್ರಗಳಲ್ಲಿ ನೋಡಿರುವಂತೆ ಕೃಷ್ಣ ಬಣ್ಣ
ಕೃಷ್ಣನ ಬಣ್ಣ ನೀಲಿಯಲ್ಲ ಕಪ್ಪು! ಎಲ್ಲರೂ ಚಿತ್ರಗಳಲ್ಲಿ ನೋಡಿರುವಂತೆ ಕೃಷ್ಣ ಬಣ್ಣ
ನೀಲಿ, ಸಿನಿಮಾಗಳಲ್ಲಿ, ನಾಟಕಗಳಲ್ಲಿಯೂ ಕೃಷ್ಣ ಪಾತ್ರಧಾರಿಗಳಿಗೆ ನೀಲಿ ಬಣ್ಣವೇ ಪೂಸಲಾಗಿರುತ್ತದೆ. ಆದರೆ ಕೃಷ್ಣನ ಬಣ್ಣ ಕಪ್ಪು ಎನ್ನುತ್ತವೆ ಕತೆಗಳು. ಆತನ ಬಣ್ಣ ಮೋಡದ ಕಪ್ಪಿನಂತಹುದು.
ಗುರುವಿನ ಮಗನಿಗೆ ಪುನರ್ಜನ್ಮ ನೀಡಿದ್ದ ಕೃಷ್ಣ ಶ್ರೀಕೃಷ್ಣನ ಗುರುಕುಲದ ಕತೆಗಳಲ್ಲಿ ಹೆಚ್ಚು ಪ್ರಚಲಿತ ಕೃಷ್ಣ-ಕುಚೇಲನ ಕತೆ ಆದರೆ ಅದೇ ಕಾಲಘಟ್ಟದ ಮತ್ತೊಂದು ಕತೆಯೂ ಇದೆ. ಕೃಷ್ಣ ಮತ್ತು ಬಲರಾಮ ಗುರುಕುಲದ ಶಿಕ್ಷಣ ಪೂರ್ಣಗೊಳಿಸಿದ ಮೇಲೆ ಗುರು ಸಂದೀಪನಿ ಪುನಿಯನ್ನು ಕೇಳುತ್ತಾರೆ 'ಏನು ಗುರು ದಕ್ಷಿಣೆ ಬೇಕು?' ಎಂದು, ಆಗ ಗುರುವು, ಸಮುದ್ರದಲ್ಲಿ ಬಿದ್ದು ಸತ್ತ ಮಗನನ್ನು ವಾಪಸ್ ತಂದುಕೊಡುವಂತೆ ಕೇಳುತ್ತಾರೆ. ಆಗ ಕೃಷ್ಣ ಬಲರಾಮರು ಪ್ರಬಾಸ ಸಮುದ್ರಕ್ಕೆ ಬಂದು, ಗುರುವಿನ ಮಗ ಸತ್ತು ಪಾಂಜನ್ಯವೊಂದರ ಒಳಗೆ ಇರುವುದಾಗಿ ತಿಳಿಯುತ್ತದೆ. ಅದನ್ನು ಸಾವಿನ ದೇವತೆ ಯಮನ ಬಳಿ ಹೋಗಿ ಮನವಿ ಮಾಡಿ ಬದುಕಿಸಿ ವಾಪಸ್ ಕರೆತರುತ್ತಾರೆ. ಏಕಲವ್ಯನನ್ನು ಕೊಂದಿದ್ದು ಶ್ರೀಕೃಷ್ಣ ಮಹಾಭಾರತದ ಪರಮೋಚ್ಛ ಬಿಲ್ಲುಗಾರರಲ್ಲಿ ಒಬ್ಬ ಏಕಲವ್ಯನನ್ನು ಕೊಂದಿದ್ದು ಶ್ರೀಕೃಷ್ಣನೇ ಎನ್ನಲಾಗುತ್ತದೆ. ಏಕಲವ್ಯ ಶ್ರೀಕೃಷ್ಣನ ಚಿಕ್ಕಪ್ಪ ದೇವಶರವುನ ಮಗ ಎನ್ನಲಾಗುತ್ತದೆ. ಇದರ ಬಗ್ಗೆ ಕೆಲವು ಗೊಂದಲಗಳೂ ಇವೆ. ಬೆರಳು ಕಳೆದುಕೊಂಡ ಏಕಲವ್ಯ ಆ ನಂತರ ಎಡಗೈ ಇಂದ ಬಿಲ್ವಾಬ್ಯಾಸ ಮಾಡಿ ಜರಾಸಂಧನ ಸೇನೆ ಸೇರಿಕೊಳ್ಳುತ್ತಾನೆ. ಕೃಷ್ಣ-ರುಕ್ಮಿಣಿಯನ್ನು ಎತ್ತಿಕೊಂಡು ಹೋಗಬೇಕಾದರೆ ಆತ ಅಡ್ಡವಾಗಿ ಬಂದ ಕಾರಣ ಕೃಷ್ಣನು ಆತನ ಮೇಲೆ ಬಂಡೆ ಎಸೆದು ಕೊಂದನೆಂದು ಕತೆಗಳು ಹೇಳುತ್ತವೆ. ಆದರೆ ಇನ್ನು ಕೆಲವು ಕತೆಗಳಲ್ಲಿ ಜರಾಸಂಧನ ಬಳಿ ಇದ್ದ ಏಕಲವ್ಯ ಜರಾಸಂಧನ ಸಾವಿನ ನಂತರ ಧುರ್ಯೋದನನ ಬಳಿ ಸೇರಿ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಹತನಾದ ಎನ್ನುವ ಕತೆಯೂ ಇದೆ.
ಕೃಷ್ಣ-ರಾಧೆಯ ಕತೆ ಏನು? ಅವರು ಮದುವೆಯಾಗಲಿಲ್ಲವೇ? ಕೃಷ್ಣನನ್ನು ನೆನೆದಾಗ ರಾಧೆ ತಂತಾನೆ ನೆನಪಿಗೆ ಬರುತ್ತಾಳೆ. ಅವರಿಬ್ಬರ ಪ್ರೇಮ ಐತಿಹಾಸಿಕ. ಆದರೆ ಶ್ರೀಮದ್ ಭಾಗವತಂ, ಮಹಾಭಾರತ, ಹರಿವಂಶಂ ಇನ್ನೂ ಕೆಲವು ಪುರಾತನ ಸಾಹಿತ್ಯದಲ್ಲಿ ರಾಧೆಯ ಉಲ್ಲೇಖವೇ ಇಲ್ಲ. ರಾಧೆಯ ಹೆಸರು ಮೊದಲ ಬಾರಿಗೆ ಆಚಾರ್ಯ ನಿಂಬಾರಕ್, ಕವಿ ಜಯದೇವ ಅವರ ಕೃತಿಗಳಲ್ಲಿ ಕಾಣಿಸಿಕೊಂಡಿತು ಎಂದು ಹೇಳುವವರು ಇದ್ದಾರೆ. ಜನಜನಿತ ಕತೆಯ ಪ್ರಕಾರ ಕೃಷ್ಣ-ರಾಧೆ ಪ್ರೇಮಿಗಳು ಆದರೆ ಅವರೆಂದೂ ಮದುವೆಯಾಗಲಿಲ್ಲ. ದ್ವಾರಕೆ ಬಿಟ್ಟ ನಂತರ ರಾಧೆಯನ್ನು ಕೃಷ್ಣ ಭೇಟಿಯಾಗಲೇ ಇಲ್ಲ. ಕೃಷ್ಣನಿಗೆ ನೀಡಲಾದ ಶಾಪಗಳು ಮತ್ತು ಕೃಷ್ಣನ ಅಂತ್ಯ ಭಗವಂತ ಶ್ರೀಕೃಷ್ಣನಿಗೂ ಮಹಾಭಾರತದಲ್ಲಿ ಸಾವಾಗುತ್ತದೆ. ಕೃಷ್ಣನ ವಂಶ ನಿರ್ವಂಶವಾಗಲಿ ಎಂದು ಗಾಂಧಾರಿ ಶಾಪ ನೀಡುತ್ತಾಳೆ. ದುರ್ವಾಸ ಮುನಿಯೂ ಕೃಷ್ಣನಿಗೆ ಶಾಪ ನೀಡಿರುತ್ತಾರೆ. ದೂರ್ವಾಸ ಮುನಿಗಳು ತನ್ನ ಮೈಗೆಲ್ಲಾ ಸಂಜೀವಿನ ದ್ರವ ಬಳಿಯಲು ಹೇಳಿದಾಗ ಕೃಷ್ಣನು ದೂರ್ವಾಸರ ಪಾದಗಳನ್ನು ಬಿಟ್ಟು ಇನ್ನೆಲ್ಲಾ ಕಡೆ ಬಳಿಯುತ್ತಾರೆ. ಆಗ ದೂರ್ವಾಸರು ನಿನಗೂ ನಿನ್ನ ಕಾಲಿನಿಂದಲೇ ಸಾವಾಗಲಿ ಎಂದು ಶಾಪ ನೀಡುತ್ತಾರೆ. ಕೃಷ್ಣನ ಸಾವು ಆಗಿದ್ದು ಹೇಗೆ? ಕೊಂದದ್ದು ಯಾರು? ಕುರುಕ್ಷೇತ್ರ ಮುಗಿದ ನಂತರ, ಯಾದವ ಕುಲಸ್ಥರು ಧರ್ಮದ ಹಾದಿ ಬಿಟ್ಟು ಅಧರ್ಮದ ಕಡೆಗೆ ವಾಲುತ್ತಾರೆ. ಇದರಿಂದ ಬೇಸರಗೊಂಡ ಶ್ರೀಕೃಷ್ಣ ಮರವೊಂದರ ಕೆಳಗೆ ಧ್ಯಾನ ಮಾಡುತ್ತಾ ಕೂತಿರುತ್ತಾನೆ. ಕೃಷ್ಣನ ಕಾಲಿನ ಬೆರಳನ್ನು ಹಕ್ಕಿಯೆಂದುಕೊಂಡ ಜಾರ ಎಂಬ ಬೇಡ ಕೃಷ್ಣನ ಹೆಬ್ಬೆರಳಿಗೆ ಬಾಣ ಹೊಡೆಯುತ್ತಾನೆ. ತನ್ನ ತಪ್ಪಿನ ಅರಿವಾಗಿ ಜಾರನು ಕೃಷ್ಣನಿಗೆ ಸಹಾಯ ಮಾಡಲು ಹೋದಾಗ, ಈ ಹಿಂದೆ ತ್ರೇತಾಯುಗದಲ್ಲಿ ನಾನು ರಾಮನಾಗಿದ್ದಾದ ಅಡಗಿ ವಾಲಿಯನ್ನು ಕೊಂದಿದ್ದೆ ಅದಕ್ಕೆ ಈಗ ಆ ಕರ್ಮದ ಫಲ ಅನುಭವಿಸುತ್ತಿದ್ದೇನೆ ಎಂದು ಕೃಷ್ಣ ಹೇಳಿದರಂತೆ.