HEALTH TIPS

ಕೇರಳದ ಮಾಪಿಳ ದಂಗೆಯು ಭಾರತದಲ್ಲಿನ ಮೊದಲ ತಾಲಿಬಾನಿ ಅಭಿವ್ಯಕ್ತಿ: ರಾಮ್‌ ಮಾಧವ್‌

                      ಕೋಯಿಕ್ಕೋಡ್‌ತಾಲಿಬಾನ್‌ ಎಂಬುದು ಒಂದು ಮನಸ್ಥಿತಿ. ಆ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಭಾರತೀಯ ಸಮಾಜ ಕೇರಳ. ಅಲ್ಲಿನ ಮಾಪಿಳ ದಂಗೆಯು (ಮಲಬಾರ್‌ ದಂಗೆ) ತಾಲಿಬಾನಿ ಮನಸ್ಥಿತಿಯ ಅಭಿವ್ಯಕ್ತಿಯಾಗಿತ್ತು ಎಂದು ಬಿಜೆಪಿ ರಾಷ್ಟ್ರ ಘಟಕದ ಮಾಜಿ ಪ್ರಧಾನಕಾರ್ಯದರ್ಶಿ, ಆರ್‌ಎಸ್‌ಎಸ್‌ ನಾಯಕ ರಾಮ್‌ ಮಾಧವ್‌ ಹೇಳಿದ್ದಾರೆ.


                     ಕೇರಳದಲ್ಲಿ 1921ರಲ್ಲಿ ನಡೆದಿದ್ದ ಮಾಪಿಳ ದಂಗೆಯಲ್ಲಿ ಬಲಿಯಾದವರ ಸ್ಮರಣಾರ್ಥ ಕೋಯಿಕ್ಕೋಡ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಮ್‌ ಮಾಧವ್‌ ಮಾತನಾಡಿದರು.

                      'ತಾಲಿಬಾನ್ ಕೇವಲ ಭಯೋತ್ಪಾದಕ ಸಂಘಟನೆಯಲ್ಲ. ಅದು ಒಂದು ಮನಸ್ಥಿತಿ. ಕಳೆದ ಶತಮಾನದಲ್ಲಿ, ತಾಲಿಬಾನ್‌ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಸಮಾಜ ಕೇರಳವಲ್ಲದೆ ಮತ್ಯಾವುದೂ ಅಲ್ಲ. ಮಾಪಿಳ ದಂಗೆಯು ಭಾರತದಲ್ಲಿನ ತಾಲಿಬಾನಿ ಮನಸ್ಥಿತಿಯ ಮೊದಲ ಅಭಿವ್ಯಕ್ತಿಯಾಗಿದೆ,' ಎಂದು ಮಾಧವ್‌ ತಿಳಿಸಿದರು.

            ಈ ದುಷ್ಕೃತ್ಯದ ಬಗ್ಗೆ ತಿಳಿಯಲು ಪ್ರಪಂಚಕ್ಕೆ ಯಾವುದೇ ಮಾರ್ಗವಿಲ್ಲದ ಕಾರಣ, ಹಿಂಸಾಚಾರವನ್ನು ಮರೆಮಾಚಲು ಪ್ರಯತ್ನಿಸಲಾಯಿತು. ಇದು ಬ್ರಿಟಿಷರ ವಿರುದ್ಧದ ಚಳುವಳಿ ಅಥವಾ 'ಜಮೀನ್ದಾರರ' ವಿರುದ್ಧದ ಕಮ್ಯುನಿಸ್ಟ್ ಕ್ರಾಂತಿ ಎಂದು ಬಿಂಬಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

                  ರಾಮ್‌ ಮಾದವ್‌ ಹೇಳಿದ ಮಾಪಿಳ ದಂಗೆಯು ಕೇರಳದ ಮಲಬಾರ್‌ ಪ್ರಾಂತ್ಯದಲ್ಲಿ 1921ರ ಆಗಸ್ಟ್‌ 20ರಿಂದ 1922ರ ವರೆಗೆ ನಡೆದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries