ಕಾಸರಗೋಡು: ಬದಿಯಡ್ಕ ಗ್ರಾಮ ಪಂಚಾಯತ್ ನ ಬೇಳ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಶಾಶ್ವತ ನರ್ಸರಿ ಉದ್ಘಾಟನೆ ನಡೆದಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಮೂರನೇ ಜಿಲ್ಲಾ ನರ್ಸರಿಗೆ ಚಾಲನೆ ಲಭಿಸಿದೆ.
ಉತ್ತಮ ಗುಣಮಟ್ಟದ ಸ್ಥಳೀಯ ತಳಿಯ, ವೃಕ್ಷವಾಗಿ ಬೆಳೆಯಬಲ್ಲ ಸಸಿಗಳನ್ನು ಉತ್ಪಾದಿಸಿ ಸಾರ್ವಜನಿಕರಿಗೆ, ವಿವಿಧ ಇಲಾಖೆಗಳಿಗೆ ಇಡೀ ವರ್ಷ ಲಭಿಸುವ ರೀತಿಯಲ್ಲಿ ಸಮಾಜ ಅರಣ್ಯೀಕಲರಣ ವಿಭಾಗ ಈ ನರ್ಸರಿಗಳನ್ನು ನಿರ್ಮಿಸುತ್ತಿದೆ.ಕಾಸರಗೋಡು ನಗರದಿಂದ 9 ಕಿಮೀ ದೂರದ ಬದಿಯಡ್ಕ ಗ್ರಾಮ ಪಂಚಾಯತ್ ನ ಸಂರಕ್ಷಿತ ಅರಣ್ಯ ಎಂಬ ಸರ್ಟಿಪೈ ನಡೆಸಲು ಶೀಫಾರಸು ಮಾಡಲಾದ ಬೇಳದ 15.90 ಹೆಕ್ಟೇರ್ ಜಾಗದ 2 ಹೆಕ್ಟೇರ್ ಭೂಮಿಯಲ್ಲಿ ಬರ್ಸರಿ ಸ್ಥಾಪಿಸಲಾಗಿದೆ. ಇದಕ್ಕಿರುವ ಕಾಂಪೆನ್ ಸೇಟರಿ ಫಾರೆಸ್ಟೇಷನ್ ನಿಧಿಯು ಮೆನೆಜ್ ಮೆಂಟ್ ಆಂಡ್ಪ್ಲಾನಿಂಗ್ ಪ್ರಾಧಿಕಾರ ಯೋಜನೆಯ ಮೂಲಕ 80,00,000 ರೂ. ಮಂಜೂರು ಮಾಡಿತ್ತು. ಇದರ್ಲಲಿ ಂಊಲಭೂತ ಸೌಲಭ್ಯಗಳಿಗಾಗಿ ಮತ್ತು ನಿರ್ಮಾಣ ಚಟುವಟಿಕೆಗಳಿಗಾಗಿ 52,10,447 ರೂ. ವೆಚ್ಚವಾಗಿದೆ. ಆಫೀಸ್ ಕಂ ಲೆಬಾರೆಟರಿ ಕಟ್ಟಡ, ಹೀಪಿಂಗ್ ಏರಿಯಾ ಕಂ ಪಾಟಿಂಗ್ ಮಿಕ್ಚರ್ ಯೂನಿಟ್, ಚಾಪಿಂಗ್ ರೂಂ, ಸೀಡ್ ಡ್ರಯಿಂಗ್ ಯಾರ್ಡ್, ಲೇಬರ್ ರೆಸ್ಟಿಂಗ್ ರೂಂ ಇತ್ಯಾದಿ ಸಜ್ಜುಗೊಂಡಿದೆ.