ಕಾಸರಗೋಡು: ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆ ಮುಂದಿರಿಸಿ ನಡೆಯುತ್ತಿರುವ ಹೋರಾಟದನ್ವಯ ಸೆ. 2ರಂದು ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಧರಣಿ ನಡೆಯಲಿದೆ.
ಕಳೆದ ಹನ್ನೊಂದು ತಿಂಗಳ ಕಾಲ ಸರ್ಕಾರದ ವತಿಯಿಂದ ವಿತರಿಸಲಾದ ಕಿಟ್‍ಗೆ ಕಮಿಶನ್ ನೀಡುವಂತೆ ಒತ್ತಾಯಿಸಿ ಸರಣಿ ಸತ್ಯಾಗ್ರಹ ಆಯೋಜಿಸಲಾಗಿದೆ. ಸೆ. 1ರಂದು ಸರಣಿ ಸತ್ಯಾಗ್ರಹ ಆರಂಭಗೊಳ್ಳಲಿದ್ದು, 2ರಂದು ಕಾಸರಗೋಡು ಘಟಕ ವತಿಯಿಂದ ಧರಣಿ ನಡೆಯುವುದು. ಸೆಕ್ರೆಟೇರಿಯೆಟ್ ಧರಣಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾಸರಗೋಡಿನಲ್ಲಿ ನಡೆದ ಸಭೆಯಲ್ಲಿ ಸಂಘಟನೆ ರಾಜ್ಯ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಮಾನ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಶಂಕರ್ ಬೆಳ್ಳಿಗೆ ಅಧ್ಯಕ್ಷತೆ ವಹಿಸಿದ್ದರು. ಧರಣಿಯಲ್ಲಿ ಹೆಚ್ಚಿನ ಸದಸ್ಯರು ಪಾಲ್ಗೊಳ್ಳುವಂತೆ ಸೂಚಿಸಲಾಯಿತು.