ತಿರುವನಂತಪುರಂ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಹರಡುವಿಕೆ ತೀವ್ರಗೊಂಡಿದೆ. ನಿನ್ನೆ ರಾಜ್ಯದಲ್ಲಿ 32,000 ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ಬಾಧಿಸಿತು. ಟಿಪಿಆರ್ ಹತ್ತೊಂಬತ್ತಕ್ಕಿಂತ ಮೇಲಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 20,000 ದಾಟಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದೆ. ಟ್ರಿಪಲ್ ಲಾಕ್‍ಡೌನ್‍ಗಳಂತೆಯೇ ನಿರ್ಬಂಧಗಳಿರಲಿವೆ. ಕಳೆದ ಮಂಗಳವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ಭಾನುವಾರಗಳ ಲಾಕ್‍ಡೌನ್ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಯಲಿದೆ. ಆ ಬಳಿಕ, ನಿರ್ಬಂಧಗಳನ್ನು ಅಧ|ಇಕೃತವಾಗಿ ಘೋಷಿಸಲಾಗುವುದು. ಆದರೆ ಜನರನ್ನು ಪೂರ್ವ ತಯಾರಿಗೊಳಿಸಲು ಈ ವಿವರಗಳನ್ನು ನೀಡಲಾಗಿದೆ.