ಆಲಪ್ಪುಳ: ವಾಟ್ಸಾಪ್ ಗುಂಪಿನ ಮೂಲಕ ಪರಿಚಗೊಂಡ ಹಳೆಯ ಶಾಲಾ ಸಹಪಾಠಿಯೊಂದಿಗೆ ಮನೆ ತೊರೆದ ಗೃಹಿಣಿಯನ್ನು ಪೋಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ಕಾಯಂಕುಳಂನಲ್ಲಿ ಬಂಧಿಸಲಾಯಿತು.
ಕಾಯಂಕುಳಂ ಕೃಷ್ಣಾಪುರಂ ಕಾಪ್ಪಿಲ್ ಮೇಕ್ ಕುಟ್ಟಪ್ಪುರತ್ ತರಯಿಲ್ ರಮ್ಯಾ (28) ಮತ್ತು ಕಾಪಿಲ್ ಮೇಕ್ ವಂದನಂನ ವಿಕಾಸ್ (28) ಬಂಧಿತರು. ಶಾಲಾ ಹಳೆಯ ವಿದ್ಯಾರ್ಥಿಗಳ ಸಮುದಾಯದ ವಾಟ್ಸಾಪ್ ಗ್ರೂಪ್ ಮೂಲಕ ತಮ್ಮ ಪರಿಚಯವನ್ನು ನವೀಕರಿಸಿದ ನಂತರ ಇಬ್ಬರೂ ಪ್ರೀತಿಸಿ ಪರಾರಿಯಾಗಿದ್ದರು.
ಇತ್ತೀಚೆಗೆ ವಾಟ್ಸಾಪ್ ಗ್ರೂಪ್ ಮೂಲಕ ಇಬ್ಬರೂ ಮತ್ತೆ ಜೊತೆಯಾಗಿದ್ದರು. ಗೃಹಿಣಿ ತನ್ನ ಐದು ವರ್ಷದ ಮಗುವನ್ನು ಬಿಟ್ಟು ಯುವಕನ ಜೊತೆ ಸಹಪಾಠಿಯ ಜೊತೆ ಪರಾರಿಯಾದರು. ಹತ್ತು ದಿನಗಳ ಹಿಂದೆ ಅವರು ಪರಾರಿಯಾಗಿದ್ದರು. ಗೃಹಿಣಿ ನಾಪತ್ತೆಯಾದ ಬಳಿಕ ಸಂಬಂಧಿ ಕಾಯಂಕುಳಂ ಪೋಲೀಸರಿಗೆ ದೂರು ನೀಡಿದ್ದರು.
ಮಹಿಳೆಯ ಪೋನ್ ಕರೆಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಇಬ್ಬರನ್ನು ಕಾಯಂಕುಳಂನಲ್ಲಿ ವಶಕ್ಕೆ ಪಡೆಯಲಾಯಿತು. ಗೃಹಿಣಿ ತನ್ನ ಐದು ವರ್ಷದ ಮಗುವನ್ನು ಉದ್ದೇಶಪೂರ್ವಕವಾಗಿ ತ್ಯಜಿಸಿರುವುದನ್ನು ಮನಗಾಣಲಾಗಿದೆ ಮತ್ತು ಗೃಹಿಣಿ ಮತ್ತು ಆಕೆಯ ಗೆಳೆಯನನ್ನು ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಯುವಕ ಅವಿವಾಹಿತ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿ ರಿಮಾಂಡ್ ಮಾಡಲಾಗಿದೆ.