ಬದಿಯಡ್ಕ: ಕೇರಳ ಸರ್ಕಾರದ ಆರ್ಥಿಕ ಮೀಸಲಾತಿಯನ್ವಯ ಕರಾಡ ಬ್ರಾಹ್ಮಣ ಸಮಾಜವನ್ನು ಸೇರ್ಪಡೆಗೊಳಿಸುವಂತೆ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ವತಿಯಿಂದ ಉದುಮ ಶಾಸಕ ಸಿ.ಎಚ್ ಕುಞಂಬು ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಅಧ್ಯಕ್ಷ ಶಂಕರನಾರಾಯಣ ಭಟ್ಟಕಾಯರ್‍ಗದ್ದೆ, ಉಪಾಧ್ಯಕ್ಷ ಕೃಷ್ಣಮೂರ್ತಿ, ರಾಜಾರಾಮ ಪೆರ್ಲ, ರಂಗಶರ್ಮ ಉಪ್ಪಂಗಳ ಜತೆಗಿದ್ದರು.