ಕಾಸರಗೋಡು: ಜನಪರ ಯೋಜನೆಯ ಬೆಳ್ಳಿಹಬ್ಬ ಅಂಗವಾಗಿ ಕಾಸರಗೋಡು ನಗರಸಭೆಯಲ್ಲಿ ವಿಸ್ತೃತ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಆ.17ರಂದು ಮಧ್ಯಾಹ್ನ 3.30ಕ್ಕೆ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ನಗರಸಭೆಯ ಹಿಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಲಾಗುವುದು. ವಿವಿಧ ವಲಯಗಳಲ್ಲಿ ಸಾಧನೆ ನಡೆಸಿರುವ ಗಣ್ಯರನ್ನು ಅವರ ಮನೆಗಳಿಗೆ ತೆರಳಿ ಗೌರವಿಸಲಾಗುವುದು.