ಕಾಸರಗೋಡು: 'ಎದೆಹಾಲಿನಿಂದ ಸಂರಕ್ಷಣೆ-ಒಂದು ಸಂಘಟಿತ ಜವಾಬ್ದಾರಿ'ಎಂಬ ವಿಚಯದಲ್ಲಿ ಕಾಸರಗೋಡು ಜಿಲ್ಲಾ,ಟ್ಟದಲ್ಲಿ ಆನ್‍ಲೈನ್ ಚರ್ಚೆ ನಡೆಸಲಾಯಿತು. ವಿಶ್ವ ಸ್ತನ್ಯಪಾನ ವಾರಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಐಸಿಡಿಎಸ್ ಜಿಲ್ಲಾ ಪ್ರೋಗ್ರಾಮ್ ಕಚೇರಿ, ಮಹಿಳಾ ಶಕ್ತಿ ಕೇಂದ್ರ, ನ್ಯಾಶನಲ್ ನ್ಯೂಟ್ರಿಶನ್ ಮಿಶನ್ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‍ರಣವೀರ್‍ಚಂದ್ ಸಮಾರಂಭ ಉದ್ಘಾಟಿಸಿದರು. ಆ. 1ರಿಂದ ಏಳರ ವರೆಗೆ ವಿಶ್ವ ಸ್ತನ್ಯಪಾನ ವಆರಾಚರಣೆ ಆಚರಿಸಲಾಗುತ್ತಿದೆ. ಎದೆಹಾಲಿನ ಪ್ರಾಧಾನ್ಯತೆ ಹಾಗೂ ನವಜಾತ ಶಿಶುವಿಗೆ ಎದೆಹಾಲಿನ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ತನ್ಯಪಾನ ವಾರವನ್ನು ಅಚರಿಸಲಾಗುತ್ತಿದೆ. ಇದಕ್ಕಾಗಿ 'ಎದೆಹಾಲಿನಿಂದ ಸಂರಕ್ಷಣೆ-ಒಂದು ಸಂಘಟಿತ ಜವಾಬ್ದಾರಿ'ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆನ್‍ಲೈನ್ ಮೂಲಕ ನಡೆದ ಚರ್ಚೆಯಲ್ಲಿ ಐಸಿಡಿಎಸ್ ಅಧಿಕಾರಿ ಕವಿತಾರಾಣಿ ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಶಕ್ತಿಕೇಂದ್ರ ಜಿಲ್ಲಾ ಕಾರ್ಡಿನೇಟರ್ ಕೆ. ಶಿಲ್ಪಾ ಮೋಡರೇಟರ್ ಆಗಿದ್ದರು.ಡಾ. ಕೆ. ಜಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.