ಮಂಜೇಶ್ವರ: ಬೆಜ್ಜ ಜಲಾನಯನ ಸಮಿತಿಯ ನೇತೃತ್ವದಲ್ಲಿ ಹಲವಾರು ಜನೋಪಯೋಗಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ನಬಾರ್ಡ್‍ನಿಂದ ಕೊಡಮಾಡಿದ ಆರ್ಥಿಕ ಸಹಾಯವನ್ನು ಫಲಾನುಭವಿಗಳಿಗೆÀ ಲಭ್ಯವಾಗುವಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ.
ಜಲಾನಯನ ಸಮಿತಿ ಆಶ್ರಯದಲ್ಲಿ ಎರಡು ದಿನದ ಕೋಳಿಸಾಕಾಣಿಕೆ ತರಬೇತಿ ಕೋವಿಡ್ ಮಾಣದಂಡವನ್ನು ಪಾಲಿಸಿಕೊಂಡು ಬೆಜ್ಜ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು. ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ.ಆರ್ ಶೆಟ್ಟಿ ಉದ್ಘಾಟಿಸಿದರು. ಪಂಚಾಯತಿ ಉಪಾಧ್ಯಕ್ಷ ಜಯರಾಮ ಉಪಸ್ಥಿತರಿದ್ದರು. ಪಂಚಾಯತಿ ಸದಸ್ಯರುಗಳಾದ ಜ್ಯೋತಿ ರೈ, ಕುಸುಮಾ, ಮಿಸ್ರಿಯಾ, ವಿನೋದ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೊಹಮ್ಮದ್ ಕುಂಞ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ವಹಿಸಿದ್ದರು. ಸಮಿತಿಯ ಕಾರ್ಯದರ್ಶಿಗಳಾದ ಟಿ.ಡಿ ಸದಾಶಿವ ರಾವ್ ಸ್ವಾಗತಿಸಿ, ವಂದಿಸಿದರು. ನಿವೃತ್ತ ಪಶುವೈದ್ಯಾಧಿಕಾರಿ ಡಾ.ಶಿವ ನಾಯ್ಕ್ ತರಬೇತಿ ನೀಡಿದರು.
ತರಬೇತಿಯ ಪ್ರಾತ್ಯಕ್ಷಿಕೆಯನ್ನು ತಲೇಕಳ ಜನಾರ್ಧನ ರೈ ಅವರ ಮನೆಯಲ್ಲಿ ನಡೆಸಲಾಯಿತು.