ಬದಿಯಡ್ಕ: ಬೇಳದ ಸಂತ ಬಾರ್ತಲೋಮಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗ್ರಾ.ಪಂ.ಸದಸ್ಯ ಡಿ.ಶಂಕರ ಧ್ವಜಾರೋಹಣಗೈದರು. ಈ ಸಂದರ್ಭ ದರ್ಬೆತ್ತಡ್ಕದ ಶ್ರೀರಾಮ ಪ್ರೆಂಡ್ಸ್ ವತಿಯಿಂದ ಶಾಲೆಯ ಓರ್ವ ವಿದ್ಯಾರ್ಥಿಯ ಆನ್ ಲೈನ್ ಕಲಿಕೆಗೆ ಪೂರಕವಾಗಿ ಮೊಬೈಲ್ ಪೋನ್ ವಿತರಿಸಲಾಯಿತು. ವಿದ್ಯಾರ್ಥಿಯ ಪರವಾಗಿ ಶಿಕ್ಷಕಿಯರಿಗೆ ಕ್ಲಬ್ ಕಾರ್ಯದರ್ಶಿ ಹರಿಶ್ಚಂದ್ರ ಅವರು ಪೋನ್ ಹಸ್ತಾಂತರಿಸಿದರು.