HEALTH TIPS

ಯಾವಾಗಲೂ ತುರುಬು ಕಟ್ಟುವುದರಿಂದ ಆಗುವ ಒಳಿತು-ಕೆಡುಕುಗಳೇನು ಗೊತ್ತಾ?

               ಹೆಣ್ಣುಮಕ್ಕಳು ಅದೆಷ್ಟೇ ಚೆನ್ನಾಗಿ ಹೇರ್ ಸ್ಟೈಲ್ ಮಾಡಿದ್ದರೂ, ಅದು ಕೊನೆಗೆ ತಲುಪುವುದು ಎಲ್ಲವನ್ನ ಬಾಚಿ, ಮೇಲೊಂದು ಗಂಟು ಹಾಕುವ ಮೂಲಕವೇ. ಅದರಲ್ಲೂ ಮನೆಯಲ್ಲಿರುವಾಗಿ ಈ ಟಾಪ್ ನಾಟ್ ಹೇರ್ ಸ್ಟೈಲ್ ಎಲ್ಲರ ಫೇವರೆಟ್. ಇದರಿಂದ ಪದೇ ಪದೇ ಕೂದಲು ಮುಖದ ಮೇಲೆ ಬೀಳುವ ಕಿರಿಕಿರಿಯೂ ತಪ್ಪುವುದು, ಆರಾಮವಾಗಿ ಕೆಲಸವೂ ಮಾಡಬಹುದು.

                ಆದರೆ ಯಾವಾಗಲೂ ಇದೇ ಹೇರ್ ಸ್ಟೈಲ್ ಮಾಡುವುದರಿಂದ ನಿಮ್ಮ ಕೂದಲಿಗೆ ಹಾನಿಯಾಗಬಹುದು ಎಂಬುದನ್ನು ಎಂದಾದರೂ ಯೋಚನೆ ಮಾಡಿದ್ದೀರಾ? ಹೌದು, ಈ ಟಾಪ್ ನಾಟ್ ಹೇರ್ ಸ್ಟೈಲ್ ಹೆಚ್ಚು ಮಾಡಿಕೊಳ್ಳುವುದರಿಂದ ಆಗುವ ಒಳಿತು ಹಾಗೂ ಅಡ್ಡಪರಿಣಾಮಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.


              ಕೂದಲು ಮುಖಕ್ಕೆ ಬೀಳುವುದನ್ನು ತಡೆಯುವುದು: ನಿಮಗೆಲ್ಲಾ ಗೊತ್ತಿರುವ ಹಾಗೇ ಮುಖಕ್ಕೆ ಕೂದಲು ಬೀಳುವುದರಿಂದ, ಮುಖದಲ್ಲಿ ಮೊಡವೆ ಬರಲು ಕಾರಣವಾಗುವುದು. ಜೊತೆಗೆ ಕಿರಿಕಿರಿ ಬೇರೆ. ಅದಕ್ಕಾಗಿ ಹೆಚ್ಚಿನವರು ಎಲ್ಲವನ್ನೂ ಬಾಚಿ, ಎಳೆದು ಮೇಲೊಂದು ಬನ್ ಹಾಕಿ ಬಿಡುವುದು. ಇದರಿಂದ ಆರಾಮವಾಗಿ ನಮ್ಮ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಜೊತೆಗೆ ನಿಮ್ಮನ್ನು ಸ್ಟೈಲ್ ಆಗಿಯೂ ಕಾಣುವಂತೆ ಮಾಡುತ್ತದೆ. ಇದು ಕೇವಲ ಮನೆಯೊಳಗೆ ಅಲ್ಲ, ಹೊರಹೋಗುವಾಗಲೂ ಮಾಡಿಕೊಳ್ಳಬಹುದು.
       ಮುಖದ ವೈಶಿಷ್ಟ್ಯಗಳನ್ನು ಹೆಚ್ಚಿಸುವುದು: ಈ ಟಾಪ್ ನಾಟ್ ಹೇರ್ ಸ್ಟೈಲ್ ತಕ್ಷಣವೇ ನಿಮ್ಮ ನೋಟವನ್ನು ಮತ್ತು ಮುಖದ ವೈಶಿಷ್ಟ್ಯಗಳನ್ನು ಹೆಚ್ಚಿಸುತ್ತದೆ. ಈ ಶೈಲಿಯು ನಿಮ್ಮ ದವಡೆಯು ಹೆಚ್ಚು ಸ್ಪಷ್ಟವಾಗಿ ಕಾಣಲು ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ಕೆನ್ನೆಯ ಮೂಳೆಗಳನ್ನು ಪಾಪ್ ಮಾಡಬಹುದು. ಅಷ್ಟೇ ಅಲ್ಲ, ಮುಖಕ್ಕೆ ಮಾಡಿದ ಮೇಕಪ್ ಕೂದಲಿಂದ ಹಾಳಾಗುತ್ತದೆ ಎಂಬ ಚಿಂತೆಯೂ ಇರುವುದಿಲ್ಲ.
              ಟ್ರೆಂಡಿಯಾಗಿರುವುದು: ಒಂದು ವೇಳೆ ನೀವು ತಲೆಗೆ ಎಣ್ಣೆ ಹಾಕಿದ್ದರೂ, ಈ ಸ್ಟೈಲ್ ಹೆಚ್ಚು ಸೂಕ್ತವಾಗುವುದು. ಹೊರಗೆ ಹೋಗುವ ಪ್ಲಾನ್ ತಿಳಿಯದೇ, ತಲೆಗೆ ಎಣ್ಣೆ ಮಾಸಾಜ್ ಮಾಡಿಕೊಂಡಿದ್ದರೆ, ತಕ್ಷಣವೇ ಈ ಟಾಪ್ ನಾಟ್ ಹೇರ್ ಸ್ಟೈಲ್ ಮಾಡಿಕೊಂಡರೆ ಯಾವುದೇ ಕಿರಿಕಿರಿ ಇರುವುದಿಲ್ಲ. ಅಷ್ಟೇ ಅಲ್ಲ, ಈ ಹೇರ್ ಸ್ಟೈಲ್ ನ್ನು ಮತ್ತಷ್ಟು ಸೊಗಸಾಗಿ ಕಾಣುವಂತೆ ಮಾಡಲು, ಹೇರ್ ಜೆಲ್ ಬಳಸಿ, ಆಮೇಲೆ ಗಂಟು ಹಾಕಿಕೊಂಡರೆ ಆಯಿತು, ಎಲ್ಲರ ನಡುವೆ ಎದ್ದು ಕಾಣುವುದರಲ್ಲಿ ಸಂದೇಹವಿಲ್ಲ.
          ಟಾಪ್ ನಾಟ್ ಹೇರ್ ಸ್ಟೈಲ್ ನ ಅಡ್ಡಪರಿಣಾಮಗಳು ಹೀಗಿವೆ
                ಕೂದಲು ಒಡೆಯಲು ಕಾರಣವಾಗುವುದು: ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಿದರೆ, ಅದು ಖಂಡಿತವಾಗಿಯೂ ಸೀಳಾಗಲು ಕಾರಣವಾಗುತ್ತದೆ, ಇದು ಫ್ರಿಜಿನೆಸ್ ಗೆ ಬದಲಾಗುತ್ತದೆ. ಇದು ಗಂಟು ಹಾಕಿದ ಪ್ರದೇಶದಲ್ಲಿ ಶುಷ್ಕತೆ ಉಂಟುಮಾಡಬಹುದು ಏಕೆಂದರೆ ಪದೇ ಪದೇ ಅದೇ ಜಾಗದಲ್ಲಿ ಗಂಟಾಕುವುದರಿಂದ ಡ್ರೈನೆಸ್ ಗೆ ಕಾರಣವಾಗುವುದು. ಆದ್ದರಿಂದ ನಿಮ್ಮ ಕೂದಲನ್ನು ಟಾಪ್ ನಾಟ್ ಹಾಕುವಾಗ ಸಡಿಲವಾಗಿರುವಂತೆ ನೋಡಿಕೊಳ್ಳಿ.
          ತಲೆನೋವಿಗೆ ಕಾರಣವಾಗಬಹುದು: ನಿಮ್ಮ ಕೂದಲನ್ನು ನೆತ್ತಿಯ ಮೇಲೆ ತುಂಬಾ ಗಟ್ಟಿಯಾಗಿ, ಹೆಚ್ಚು ಸಮಯ ಕಟ್ಟುವುದರಿಂದ ಸ್ವಲ್ಪ ನೋವನ್ನು ಉಂಟುಮಾಡುತ್ತದೆ. ಜೊತೆಗೆ ಆ ನಾಟ್ ಹಾಕಲು ಬಳಸುವ ಕ್ಲಿಪ್ ಗಳು, ಪಿನ್ ಗಳಿಂದ ಆ ಜಾಗದಲ್ಲಿ ಗಾಯವೂ ಆಗಬಹುದು. ಈ ಎಲ್ಲಾ ವಿಚಾರಗಳಿಂದ ತಲೆನೋವು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಕೂದಲನ್ನು ಕೆಲವೊಮ್ಮೆ ಕೆಳಕ್ಕೆ ಬಿಡುವುದು ಮತ್ತು ಅಗತ್ಯವಿದ್ದರೆ ಮಸಾಜ್ ಮಾಡುವುದು ಉತ್ತಮ.
           ಕೂದಲು ಉದುರುವಿಕೆ ಹೆಚ್ಚಾಗುವುದು: ನೀವು ಕೂದಲು ಕಟ್ಟುವಾಗ ಸಾಕಷ್ಟು ಕೂದಲು ಉದುರುವುದನ್ನು ಗಮನಿಸಿದ್ದೀರಾ? ಹೌದು, ಟಾಪ್ ನಾಟ್ ನ್ನ ನಿರಂತರವಾಗಿ ಹಾಕಿಕೊಂಡರೆ ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೀವು ಕೂದಲು ಉದುರುವುದನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೆ 24/7 ಈ ಸ್ಟೈಲ್ ಮಾಡಿಕೊಳ್ಳುವುದು ಸೂಕ್ತವಲ್ಲ.

          


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries