ತಿರುವನಂತಪುರ: ಕೇರಳದಲ್ಲಿ ಹೆಚ್ಚುತ್ತಿರುವ ವಿವಾಹ ದುಂದುವೆಚ್ಚಗಳು ಮತ್ತು ಹಗರಣಗಳನ್ನು ನಿಷೇಧಿಸುವ ವಿಧೇಯಕದ ಕರಡು ಪ್ರಸ್ತಾಪಗಳನ್ನು ಕೇರಳ ಮಹಿಳಾ ಆಯೋಗವು ಕೇರಳ ಸರ್ಕಾರಕ್ಕೆ ಸಲ್ಲಿಸಿದೆ. ಮಸೂದೆಯನ್ನು ರಚಿಸುವ ಕೆಲಸವನ್ನು ಮಹಿಳಾ ಆಯೋಗಕ್ಕೆ ವಹಿಸಲಾಗಿದೆ ಎಂಬ ಆಧಾರದ ಮೇಲೆ ಕರಡು ಮಸೂದೆಯನ್ನು ಸಲ್ಲಿಸಲಾಗಿದೆ.
ಕೇರಳ ರಾಜ್ಯದ ವಿವಿಧ ಸಮುದಾಯಗಳ ನಡುವೆ ಇರುವ ವಿವಾಹ ದುಂದುವೆಚ್ಚವು ಬೆಳೆಯುತ್ತಿರುವ ಕೇರಳ ರಾಜ್ಯದ ಸಾಮಾಜಿಕ ದುರಂತವಾಗಿದೆ. ಇದು ಗಂಭೀರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಸೃಷ್ಟಿಸುತ್ತದೆ. ವಧು ಮತ್ತು ವರರಿಗೆ, ವಿಶೇಷವಾಗಿ ಮಹಿಳೆಯರಿಗೆ ಬಲವಂತವಾದ ಕೈಗೆಟುಕದ ಬಾಧ್ಯತೆಗಳನ್ನು ಸೃಷ್ಟಿಸುತ್ತದೆ. ವಿವಾಹ ಬಳಿಕ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಆಯೋಗವು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಬೊಟ್ಟುಮಾಡಲಾಗಿದೆ.
ಈ ಮಸೂದೆಯು ವಿವಿಧ ಜಾತಿ ಮತ್ತು ಧಾರ್ಮಿಕ ಸಮುದಾಯಗಳಲ್ಲಿ ವಿವಾಹದ ಜೊತೆಗೆ ವಿವಾಹ ಪೂರ್ವ ಮತ್ತು ಉತ್ತರದ ಸಮಾರಂಭಗಳಲ್ಲಿ ಹಗರಣಗಳು ಮತ್ತು ದುಂದುವೆಚ್ಚಗಳನ್ನು ಬೊಟ್ಟುಮಾಡಿದೆ.