ನವದೆಹಲಿ: ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಭಾಗವಾಗಿ ಟೆಲಿಮೆಡಿಸಿನ್, ಡಿಜಿಟಲ್ ಆರೋಗ್ಯ ಮತ್ತು ಕೃತಕ ಬುದ್ದಿಮತ್ತೆ ವಲಯಗಳಲ್ಲಿನ 75 ನವೋದ್ಯಮಗಳನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಸದ್ಯದಲ್ಲೇ ಹಲವು ವಿಶೇಷ ರಿಯಾಯ್ತಿ ಯೋಜನೆಗಳನ್ನು ಪ್ರಕಟಿಸಲಿದೆ.
ಜೈವಿಕ ತಂತ್ರಜ್ಞಾನ ಇಲಾಖೆಯಡಿ ಬರುವ ಸಾರ್ವಜನಿಕ ವಲಯದ ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವು ಮಂಡಳಿ-ಬಿರಾಕ್ ಈ ಯೋಜನೆಗಳನ್ನು ಆರಂಭಿಸಲಿದೆ.
ನವದೆಹಲಿಯಲ್ಲಿ ಬಿರಾಕ್ ನ ನಿರ್ದೇಶಕರ ಸಭೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಈ ವಿಷಯ ತಿಳಿಸಿದ್ದಾರೆ. ಬಿರಾಕ್ ಸುಮಾರು 1 ಸಾವಿರದ ಸಾವಿರದ 500 ಸಣ್ಣ ಹಾಗೂ ಮಧ್ಯಮ ಪ್ರಮಾಣದ ನವೋದ್ಯಮಗಳಿಗೆ 2ಸಾವಿರದ 128 ಕೋಟಿ ರೂಪಾಯಿಗೂ ಅಧಿಕ ನೆರವು ನೀಡಿದೆ ಎಂದೂ ಸಚಿವರು ಹೇಳಿದರು.