ಬದಿಯಡ್ಕ: ವಿಂಶತಿ ಸಂಭ್ರಮದಲ್ಲಿರುವ ಗಡಿನಾಡು ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಎರಡು ದಶಕಗಳ ಸಾಧನೆಯ ಹೆಜ್ಜೆ ಗುರುತುಗಳ ಕಿರು ಪತ್ರ ಬಿಡುಗಡೆ ಸಮಾರಂಭ ಎಡನೀರು ಶ್ರೀ ಮಠದಲ್ಲಿ ಜರಗಿತು.
ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣಾ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಕಿರುಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಮೊದಲ ಪ್ರತಿ ಸ್ವೀಕರಿಸಿದರು. ಸಂಸ್ಥಾಪಕ ಕೆ.ವಾಮನ ರಾವ್ ಬೇಕಲ್ ಅವರು ಕನ್ನಡ ಭವನ ಮತ್ತು ಗ್ರಂಥಾಲಯದ ಕಾರ್ಯಕ್ರಮಗಳ ವಿವರಣೆ ನೀಡಿದರು. ರಾ.ಸ್ವ.ಸೇ.ಸಂಘದ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಖ್ಯಾತ ವೈಂಗ್ಯಚಿತ್ರ ಕಲಾವಿದ ವೆಂಕಟ ಭಟ್ ಎಡನೀರು, ಕೇರಳ ಪ್ರಾಂತ್ಯ ಕನ್ನಡ ಅ|ಧ್ಯಾಪಕ ಸಂಘದ ಮುಖಂಡ ವಿಶಾಲಾಕ್ಷ ಪುತ್ರಕಳ, ಕೇರಳ ರಾಜ್ಯ ದೈಹಿಕ ಶಿಕ್ಷಕ ಸಂಘಟನೆ ನೇತಾರ ಸೂರ್ಯ ಭಟ್ ಎಡನೀರು, ಕ್ಯಾಂಪ್ಕೋ ಉಪಾಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕನ್ನಡ ಭವನ ಗ್ರಂಥಾಲಯದ ಗೌರವಾಧ್ಯಕ್ಷ ಪ್ರದೀಪ್ ಬೇಕಲ್, ಅಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಜಗದೀಶ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.
ಹೊರೆಕಾಣಿಕೆ ಸಮರ್ಪಣೆ : ಎಡನೀರು ಮಠದಲ್ಲಿ ಶ್ರೀ ಸಚಿದಾನಂದ ಭಾರತೀ ಸ್ವಾಮೀಜಿಯವರ ಚಾತುರ್ಮಾಸ್ಯದ ಈ ಸಂದರ್ಭದಲ್ಲಿ ಕನ್ನಡ ಭವನ ಗ್ರಂಥಾಲಯದ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು.