ತಿರುವನಂತಪುರಂ: ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಒಂದು ಹಂತದ ನಿಯಂತ್ರಣಕ್ಕೊಳಪಟ್ಟಂತೆ ಭಾಸವಾಗುತ್ತಿರುವಂತೆ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಸೂಚನೆ ನೀಡಿವೆ. ಆದರೆ ಕೊರೊನಾ ಹರಡುವಿಕೆ ಕಡಿಮೆಯಾಗದ ಕಾರಣ ಕೇರಳ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವುದು ಅನಿಶ್ಚಿತವಾಗಿದೆ. ಇತರ ರಾಜ್ಯಗಳು ಹಂತ ಹಂತವಾಗಿ ಶಾಲೆಯನ್ನು ತೆರೆಯಲು ಯೋಜನೆ ರೂಪಿಸುತ್ತಿದ್ದರೂ, ಕೇರಳದಲ್ಲಿನ್ನು ಅಂತಹ ಪರಿಸ್ಥಿತಿ ಇಲ್ಲ. ಶಿಕ್ಷಕರು ಮತ್ತು ಪೋಷಕರು ಶಾಲೆಯ ಆರಂಭದ ಬಗ್ಗೆ ಕಳವಳ ವ್ಯಕ್ತಪಡಿಸಿರುವರು.
ಮೊದಲ ಹಂತದಲ್ಲಿ, ಸರ್ಕಾರವು ಒಂಬತ್ತರಿಂದ 12 ನೇ ತರಗತಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಯೋಜಿಸುತ್ತಿವೆ ಎನ್ನಲಾಗಿದೆ. ಪರ್ಯಾಯ ದಿನಗಳಲ್ಲಿ ಅಥವಾ ಶಿಫ್ಟ್ ಆಧಾರದ ಮೇಲೆ ತರಗತಿಗಳನ್ನು ಆರಂಭಿಸುವವ ಚಿಂತನೆ ಮಾಡಲಾಗಿದೆ. ಶಾಲೆಗಳಲ್ಲಿನ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ತರಗತಿಗಳನ್ನು ಸುಗಮವಾಗಿ ನಡೆಸಬಹುದು ಎಂದು ಒಂದು ವಿಭಾಗದ ಶಿಕ್ಷಕರು ಹೇಳಿದರೆ, ಇನ್ನೊಂದು ವಿಭಾಗದ ಶಿಕ್ಷಕರು ಮತ್ತು ಪೋಷಕರು ಕೋವಿಡ್ ನಿಯಂತ್ರಣಕ್ಕೊಳಪಡದ ಕಾರಣ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರತಿರಕ್ಷೆಯಲ್ಲಿ ಮುಂಚೂಣಿಯಲ್ಲಿದ್ದರೂ, ಕೊರೋನಾ ನಿರ್ಬಂಧಗಳ ಅನುಷ್ಠಾನವು ಅಪ್ರಾಯೋಗಿಕವಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಎಲ್ಲಾ ನೆರೆಯ ರಾಜ್ಯಗಳ ಶಾಲೆಗಳು ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಮತ್ತೆ ತೆರೆಯಲ್ಪಡುತ್ತವೆ. ಓಣಂ ಬಳಿಕ ಕೋವಿಡ್ ಮೂರನೇ ತರಂಗ ಕಾಡಲಿವೆ ಎಂಬ ವರದಿಯ ಕಾರಣ ಶಾಲೆಗಳನ್ನು ಮತ್ತೆ ತೆರೆಯುವ ಬಗೆಗಿನ ಆಲೋಚನೆಗಳು ಅಪ್ರಸ್ತುತ ಎನ್ನಲಾಗಿದೆ. ಈ ಮಧ್ಯೆ ಸೋಂಕಿನ ಎರಡನೇ ತರಂಗ ರಾಜ್ಯದಲ್ಲಿನ್ನೂ ಮುಂದುವರಿದಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು ಸೇರಿದಂತೆ ಎಲ್ಲರಿಗೂ ಲಸಿಕೆ ನೀಡಬೇಕೆಂಬ ಬೇಡಿಕೆ ಹೆಚ್ಚುತ್ತಿದೆ.