ಉಪ್ಪಳ: ಹದಿನೆಂಟು ಮಾಗಣೆಗಳ ಇತಿಹಾಸ ಪ್ರಸಿದ್ದ ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಲಬಾರ್ ದೇವಸ್ವಂ ಮಂಡಳಿಯ ನೇತೃತ್ವದಲ್ಲಿ ನೂತನ ಆಡಳಿತ ಮಂಡಳಿ ನೇಮಿಸಲಾಗಿದೆ.
ಆಡಳಿತ ಮೊಕ್ತೇಸರರಾಗಿ ಕೋಡಿಬೈಲು ನಾರಾಯಣ ಹೆಗ್ಡೆ ಅವರು ಅಧಿಕಾರ ಸ್ವೀಕರಿಸಿದರು. ಮೊಕ್ತೇಸರ ಮಂಡಳಿಗೆ ಸುಕುಮಾರ ಉಪ್ಪಳ, ಶಿವರಾಮ ಪಕಳ, ತಿಮ್ಮಪ್ಪ ಭಂಡಾರಿ ಬೊಳುವಾಯಿ, ಡಾ.ಶ್ರೀರಾಜ್ ಕೈಕಂಬ ನೇಮಕಗೊಂಡಿದ್ದು, ಅಧಿಕಾರ ಸ್ವೀಕರಿಸಿದರು.