ಬದಿಯಡ್ಕ : ಭಸ್ಮಾಜೆ ಗೋಪಾಲಕೃಷ್ಣ ಭಟ್ಟರ 'ಉಪ್ಪಂಗಳ ಕೊಡೆ ಕುಟುಂಬದ ಜೀವನ ಸಂಗ್ರಾಮ'ಎಂಬ ಕೃತಿಯು ಇತ್ತೀಚೆಗೆ ಉಪ್ಪಂಗಳ ಭಸ್ಮಾಜೆಯಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನು ಅಗಲ್ಪಾಡಿ ಅನ್ನಪೂರ್ಣೇಶ್ವರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್ ದೀಪ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಕೃತಿ ಲೋಕಾರ್ಪಣೆ ಗೊಳಿಸಿದರು. ಹಿರಿಯ ಬರಹಗಾರ ಬಾಲಕೃಷ್ಣ ಕೋಳಾರಿ ಸಭಾಧ್ಯಕ್ಷತೆ ವಹಿಸಿದರು. ಸುಂದರ ಬಾರಡ್ಕ, ಕವಿತಾ ಮುಖ್ಯ ಅತಿಥಿಗಳಾಗಿದ್ದರು. ಪ್ರತಿಭಾವಂತ ವಿದ್ಯಾರ್ಥಿ ಅತುಲ್‍ಗೆ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ವಿಶೇಷ ನಗದು ಪುರಸ್ಕಾರ ನೀಡಲಾಯಿತು. ಇಂದಿರಾ ಭಸ್ಮಾಜೆ ಉಪಸ್ಥಿತರಿದ್ದರು.
ಗಿರೀಶ್ ಭಸ್ಮಾಜೆಯವರ ಶಂಖನಾದದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅತುಲ್ ಪ್ರಾರ್ಥನೆ ಹಾಡಿದರು. ನಿವೃತ್ತ ಅಧ್ಯಾಪಕ ಉಪ್ಪಂಗಳ ಡಾ.ಯು.ಶಂಕರನಾರಾಯಣ ಭಟ್ ಸ್ವಾಗತಿಸಿ ವಂದಿಸಿದರು. ಶ್ರೀಪತಿ ಎಸ್ ಸೂರ್ಡೇಲು ಕಾರ್ಯಕ್ರಮ ನಿರೂಪಿಸಿದರು.