ತಿರುವನಂತಪುರ: ಆರೋಗ್ಯ ಸಚಿವೆ ವೀಣಾ ಜಾರ್ಜ್ ವೈದ್ಯಕೀಯ ಪಿ.ಜಿ ವಿದ್ಯಾರ್ಥಿ ಯೂನಿಯನ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಮಂಗಳವಾರ ಸಂಜೆ 7 ಗಂಟೆಗೆ ಸಭೆ ನಡೆಯಲಿದೆ. ಸೋಮವಾರದಿಂದ ಆರಂಭವಾಗಲಿರುವ ಮುಷ್ಕರವನ್ನು ಪರಿಹರಿಸಲು ಪಿ.ಜಿ ವೈದ್ಯರೊಂದಿಗೆ ಈ ಮಾತುಕತೆ ನಡೆಯಲಿದೆ. ಇದೇ ವೇಳೆ ಕೆ.ಜಿ.ಎಂ.ಒ.ಎ ವೈದ್ಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಒತ್ತಾಯ ಮಾಡಿದೆ.
ಎಲ್ಲಾ ಆರೋಗ್ಯ ಕೇಂದ್ರಗಳನ್ನು ವಿಶೇಷ ಸುರಕ್ಷತಾ ವಲಯಗಳೆಂದು ಪರಿಗಣಿಸಬೇಕು. ತುರ್ತು ವಿಭಾಗ ಇರುವಲ್ಲಿ ಪೋಲಿಸ್ ಏಯ್ಡ್ ಪೋಸ್ಟ್ (ನಿಯಂತ್ರಣ ಕೇಂದ್ರ)ಸ್ಥಾಪಿಸಬೇಕು. ಭದ್ರತಾ ಕ್ಯಾಮೆರಾ ಸೇರಿದಂತೆ ಸೆಟಪ್ ನ್ನು ಹೆಚ್ಚಿಸಬೇಕು. ಎಲ್ಲಾ ಹಲ್ಲೆ ಪ್ರಕರಣಗಳು ಆಸ್ಪತ್ರೆ ರಕ್ಷಣೆ ಕಾಯ್ದೆ 2012 ರ ಅಡಿಯಲ್ಲಿರಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸಂಘಟನೆ ಮುಂದಿರಿಸಿದೆ.
ಎಫ್‍ಐಆರ್ ತೆಗೆದುಕೊಳ್ಳುವ ಮುನ್ನ ತಜ್ಞರ ಮೇಲೆ ಆರೋಪಿಗಳು ಮಾಡಿರುವ ಪ್ರಕರಣಗಳ ಬಗ್ಗೆ ತಜ್ಞರ ಸಮಿತಿ ಪರಿಶೀಲಿಸಬೇಕು ಎಂದು ಕೆಜಿಎಂಒಎ ನಿರ್ದೇಶಿಸಿದೆ.