ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ ಕೃಷಿ ಭವನದ ನೇತೃತ್ವದಲ್ಲಿ ಓಣಂ ಕೃಷಿ ಸಂತೆಗೆ ಚಾಲನೆ ನೀಡಲಾಯಿತು. ಕೃಷಿ ಸಂತೆಯನ್ನು ಎಣ್ಮಕಜೆ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ ಎಸ್.ಉದ್ಘಾಟಿಸಿದರು. ಓಣಂಗೆ ಉಪಯುಕ್ತವಾಗುವಂತೆ ಕೃಷಿಕರಿಂದ ಉತ್ಪನ್ನಗಳನ್ನು 10 ಶೇಕಡಾ ಗರಿಷ್ಠ ಬೆಲೆಗೆ ಖರೀದಿಸಿ 30 ಶೇಕಡಾ ಕನಿಷ್ಠ ಬೆಲೆಗೆ ಗ್ರಾಹಕರಿಗೆ ವಿತರಿಸುವ ಯೋಜನೆ ಇದಾಗಿದೆ ಎಂದು ಕೃಷಿ ಅಧಿಕಾರಿ ವಿನೀತ್ ವಿ.ವರ್ಮಾ ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಸಮಿತಿ ಅಧ್ಯಕ್ಷರು, ಪಂ.ಜನಪ್ರತಿನಿಧಿಗಳು,ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರು,ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.