ಕಾಸರಗೋಡು: ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲ ವ್ಯಕ್ತಿಗಳನ್ನೂ ನಿಗಾಕ್ಕೆ ಪ್ರವೇಶಿಸುವಂತೆ ಮಾಡಬೇಕಾಗಿರುವುದು ಅನಿವಾರ್ಯ ಎಂದು ತಿಳಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ ಸರಕಾರ ನೇಮಿಸಿರುವ ವಿಶೇಷ ಅಧಿಕಾರಿ ಸೌರಭ್ ಜೈನ್ ಅವರು ಈ ವಿಚಾರ ತಿಳಿಸಿದರು.
ಜಿಲ್ಲಾಧಿಕಾರಿ, ಆರೋಗ್ಯ, ಪಂಚಾಯತ್, ಪೆÇಲೀಸ್, ಕಂದಾಯ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಬುಧವಾರ ನಡೆಸಿದ ಮಾತುಕತೆಯಲ್ಲಿ ಈ ವಿಷಯ ಪ್ರಕಟಿಸಿದರು.
ಟಿ.ಪಿ.ಆರ್. ತಳಹದಿಯಲ್ಲಿ ಜಾರಿಗೊಳಿಸಲಾದ ಕಟ್ಟುನಿಟ್ಟುಗಳನ್ನು ಸಡಿಲಿಕೆ ಗೊಳಿಸುವ ವೇಳೆ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಮನೆಗಳಿಂದ ಹೊರಗಿಳಿಯುವ ಸದ್ಯತೆಗಳಿವೆ. ಈ ನಿಟ್ಟಿನಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ಖಚಿತಗೊಂಡಲ್ಲಿ ಅವರೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲ ಜನರನ್ನೂ ಪತ್ತೆಮಾಡಿದಲ್ಲಿ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ.
ಇದಕ್ಕಾಗಿ ವಾರ್ಡ್ ಮಟ್ಟದ ಆರ್.ಆರ್.ಟಿ.ಗಳಲ್ಲಿ ಸ್ಥಳೀಯ ಅಂಗನವಾಡಿಗಳ ಕಾರ್ಯಕರ್ತರನ್ನು ಸೇರಿಸಿ ಶಿಕ್ಷಕರ ಜೊತೆಗೆ ಸೇವೆಗೆ ಮತ್ತು ಸಂಪರ್ಕ ಪಟ್ಟಿ ಪರಿಶೀಲನೆಗೆ ಬಳಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ಕೋವಿಡ್ ಪ್ರತಿರೋಧ ಕಚಿತಪಡಿಸುವ ನಿಟ್ಟಿನಲ್ಲಿ ವಾಕ್ಸಿನೇಷನ್ ಗರಿಷ್ಠ ಮಂದಿಗೆ ಒದಗಿಸಬೇಕು. ಇನ್ನು ಮುಂದೆ ಶೇ 50 ಮಂದಿಗೆ ಸ್ಪಾಟ್ ನೋಂದಣಿ, ಶೇ 50 ಮಂದಿಗೆ ಆನ್ ಲೈನ್ ನೋಂದಣಿ ಮೂಲಕ ಲಸಿಕೆ ನೀಡಿಕೆ ನಡೆಯಲಿದೆ. ನೋಂದಣಿ ನಡೆಸಿರುವ ಆಯಾ ಪಂಚಾಯತ್ ಗಳ ವಾಕ್ಸಿನೇಷನ್ ಕೇಂದ್ರಗಳಲ್ಲೇ ಲಸಿಕೆ ನೀಡಿಕೆ ನಡೆಯಲಿದೆ ಎಂಬ ಆದೇಶ ಪ್ರಕಟಿಸಲಾಗಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಜಿಲ್ಲೆಯ ಕೋವಿಡ್ ಸೋಂಕು ಹರಡುವಿಕೆಯ ಸದ್ರಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಮ್ಯಕ್ರೋ ಕಂಟೈನ್ಮೆಂಟ್ ಝೋನ್ಗಳಾಗಿ ವಿಂಗಡಿಸಿ ಕಟ್ಟುನಿಟ್ಟು ಬಿಗಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಮನೆಗಳಲ್ಲಿ ನಿಗಾ ನಡೆಸುವ ಪರಿಣಾಮ ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಡೋಮಿಸಲರಿ ಕೇರ್ ಸೆಂಟರ್ ಗಳ ಚಟುವಟಿಕೆ ದಕ್ಷಗೊಳಿಸುವಂತೆ ಆದೇಶಿಸಲಾಗಿದೆ. ಇಲ್ಲಿ ಆರೋಗ್ಯ ಕಾರ್ಯಕರ್ತರ ಸೇವೆ ಖಚಿತಪಡಿಸಬೇಕು ಎಂಬ ಬೇಡಿಕೆ ಸಭೆಯಲ್ಲಿ ಕೇಳಿ ಬಂದಿದೆ. ಐ.ಸಿ.ಯು. ಹಾಸುಗೆಗಳ ಸಮಖ್ಯೆ ಹೆಚ್ಚಿಸಿ, ಆಕ್ಸಿಜನ್ ಲಭ್ಯತೆ ಖಚಿತಪಡಿಸಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಕೆ.ಆರ್. ರಾಜನ್ ತಿಳಿಸಿದರು. ನೂತನ ಮಾರ್ಗಸೂಚಿ ಜಾರಿಗೆ ಬಂದಲ್ಲಿ ಆರೋಗ್ಯ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವವರಿಗೆ ತರಬೇತಿ ನೀಡಬೇಕಿದೆ ಎಂದವರು ನುಡಿದರು.
ಜಿಲ್ಲೆಯಲ್ಲಿ ಕ್ವಾರೆಂಟೈನ್ ಆದೇಶ ಉಲ್ಲಂಘನೆ ಬಗ್ಗೆ ತೀವ್ರ ನಿಗಾ ಇರಿಸಲಾಗುತ್ತಿದೆ ಎಂದು ಅಡೀಷನಲ್ ಎಸ್.ಪಿ. ಹರಿಶ್ಚಂದ್ರ ನಾಯ್ಕ್ ತಿಳಿಸಿದರು.
ಅಂಡಿಗಳು ಪೂರ್ಣರೂಪದಲ್ಲಿ ತೆರೆಯಲಾಗುವ ಹಿನ್ನೆಲೆಯಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿಶೇಷ ಅಧಿಕಾರಿ ತಿಳಿಸಿದರು.
ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಅತುಲ್ ಎಸ್.ನಾಥ್, ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಜ್ಯಸನ್ ಮಾಥ್ಯೂ, ಸರ್ವಲೆನ್ಸ್ ಅಧಿಕಾರಿ ಎ.ಟಿ.ಮನೋಜ್ ಕುಮಾರ್, ಕೋವಿಡ್ ತಪಾಸಣೆ ನೋಡೆಲ್ ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ ಮೊದಲಾದವರು ಉಪಸ್ಥಿತರಿದ್ದರು.