ತಿರುವನಂತಪುರ: ರಾಜ್ಯದಲ್ಲಿ ಓಣಂ ಕಿಟ್ ವಿತರಣೆ ಆರಂಭವಾಗಿದೆ. ಆಹಾರ ಸಚಿವ ಜಿಆರ್ ಅನಿಲ್ ರಾಜ್ಯ ಮಟ್ಟದ ವಿತರಣೆಯನ್ನು ತಿರುವನಂತಪುರಂನಲ್ಲಿ ಉದ್ಘಾಟಿಸಿದರು. ಕಿಟ್ 570 ರೂ. ಮೌಲ್ಯದ ವಸ್ತುಗಳನ್ನು ಒಳಗೊಂಡಿದೆ ಮತ್ತು ಆ. 16 ರೊಳಗೆ ಕಿಟ್‍ಗಳ ವಿತರಣೆಯನ್ನು ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಹೇಳಿದರು.
ನಾಗರಿಕ ಪೂರೈಕೆಗಳು ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತವೆ ಮತ್ತು ಗುಣಮಟ್ಟವನ್ನು ಸುಧಾರಿಸುವುದನ್ನು ಮುಂದುವರಿಸುವುದಾಗಿ ಸಚಿವರು ಹೇಳಿದರು.
ಆಹಾರ ಕಿಟ್ 16 ವಸ್ತುಗಳನ್ನು ಒಳಗೊಂಡಿದೆ. ಮಕ್ಕಳಿಗೆ ಕ್ರೀಮ್ ಬಿಸ್ಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ನಂತರ ಅದನ್ನು ಕೈಬಿಡಲಾಯಿತು. ಓಣಂ ಕಿಟ್ ನಿಂದ ಹಪ್ಪಳವನ್ನೂ ಕೈಬಿಡಲಾಗಿದೆ. ಕಳೆದ ಓಣಂ ಕಿಟ್ ನಲ್ಲಿ ಒದಗಿಸಿದ ಹಪ್ಪಳ ಕಡಿಮೆ ಗುಣಮಟ್ಟದ್ದಾಗಿದೆ ಎಂದು ಸಾಕಷ್ಟು ವಿವಾದಗಳಾಗಿದ್ದವು.
ಪರೀಕ್ಷೆಯಲ್ಲಿ ತೇವಾಂಶ ಮತ್ತು ಸೋಡಿಯಂ ಕಾರ್ಬೋನೇಟ್ ಮಟ್ಟಗಳು ಮತ್ತು ಮಾದರಿಗಳ ಪಿ.ಎಚ್. ಮೌಲ್ಯಗಳು ಅನುಮತಿಸುವ ಮಿತಿಯನ್ನು ಮೀರಿರುವುದು ಕಂಡುಬಂದಿದೆ.
ಹಳದಿ ಕಾರ್ಡ್ ಹೊಂದಿರುವವರಿಗೆ ಓಣಂ ಕಿಟ್ ವಿತರಣೆ ಶನಿವಾರದಿಂದ ಆರಂಭವಾಗಿದೆ. ಆ.,2 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಆಗಸ್ಟ್ 4 ರಿಂದ 7 ರವರೆಗೆ ಗುಲಾಬಿ ಕಾರ್ಡ್ ಹೊಂದಿರುವವರಿಗೆ, ಆಗಸ್ಟ್ 9 ರಿಂದ 12 ರವರೆಗೆ ನೀಲಿ ಕಾರ್ಡ್ ಹೊಂದಿರುವವರಿಗೆ ಮತ್ತು ಆಗಸ್ಟ್ 13 ರಿಂದ 16 ರವರೆಗೆ ಬಿಳಿ ಕಾರ್ಡ್ ಹೊಂದಿರುವವರಿಗೆ ಕಿಟ್ ವಿತರಿಸಲಾಗುವುದು.
ಒಂದು ಕೆಜಿ ಸಕ್ಕರೆ, 500 ಮಿಲಿ ತೆಂಗಿನ ಎಣ್ಣೆ, 500 ಗ್ರಾಂ ಹಸಿರು ಬೇಳೆ, 250 ಗ್ರಾಂ ತೊಗರಿ ಬೇಳೆ, 100 ಗ್ರಾಂ ಗಳ ಮೆಣಸಿನ ಪುಡಿ, ಅರಿಶಿನ ಹುಡಿ, ಮೆಂತೆ, 1 ಕೆಜಿ ಶಬರಿ ಚಹಾ ಹುಡಿ, 180 ಗ್ರಾಂ ಶ್ಯಾವಿಗೆ, 180 ಗ್ರಾಂ ತುಪ್ಪ, 500 ಗ್ರಾಂ ಒಣ ದ್ರಾಕ್ಷಿ, 50 ಗ್ರಾಂ ಗೋಡಂಬಿ, 100 ಗ್ರಾಂ ಸಕ್ಕರೆ ಬೆರೆಸಿದ ಉಪ್ಪಿನಕಾಯಿಯಂತಹ ವಸ್ತು, ಒಂದು ಕಿಲೋ ಗೋಧಿಹುಡಿ, ಒಂದು ಪ್ಯಾಕೆಟ್ ಶಬರಿ ಸ್ನಾನದ ಸಾಬೂನು, ಬಟ್ಟೆ ಸಾಬೂನು ಎಂಬಂತೆ 16 ರಷ್ಟು ವಸ್ತುಗಳು ಕಿಟ್ ನಲ್ಲಿವೆ.