ಬದಿಯಡ್ಕ: ಶ್ರೀ ವಿಷ್ಣು ಕಲಾವೃಂದ ವಿಷ್ಣು ನಗರ ಮುಂಡಿತ್ತಡ್ಕ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಬೆಳಗ್ಗೆ 10 ಕ್ಕೆ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಸಂಘದ ಹಿರಿಯ ಸದಸ್ಯ ಸುಂದರ ಪುರುಷ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ 2020-21ನೇ ಸಾಲಿನ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ನಿತ್ಯಪ್ರಕಾಶ್ ಅವರು ಮಂಡಿಸಿದರು. ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಬಳಿಕ 2021-22 ನೇ ಸಾಲಿಗೆ ನೂತನ ಪದಾಧಕಾರಿಗಳನ್ನು ನೇಮಿಸಲಾಯಿತು. 2021-22 ನೇ ಸಾಲಿನ ಸಮಿತಿಗೆ ಅಧ್ಯಕ್ಷರಾಗಿ ಸುನಿಲ್ ಮಾಸ್ತರ್ ಮುಂಡಿತ್ತಡ್ಕ, ಉಪಾಧ್ಯಕ್ಷರುಗಳಾಗಿ ವರದರಾಜ್ ಮುಂಡಿತ್ತಡ್ಕ, ವಾಸು ನಾಯ್ಕ ಬೀರಿಕುಂಜ, ಪ್ರಧಾನ ಕಾರ್ಯದರ್ಶಿಯಾಗಿ ಸೂರ್ಯ ಪ್ರಕಾಶ್ ಶೇಡಿಮೂಲೆ, ಜೊತೆಕಾರ್ಯದರ್ಶಿಗಳಾಗಿ ಕಿಶೋರ್ ಆಳ್ವ ಮಂಜಕೊಟ್ಟಿಗೆ, ರಾಧಾಕೃಷ್ಣ ಮುಂಡಿತ್ತಡ್ಕ, ಕೋಶಾಧಿಕಾರಿಯಾಗಿ ಪ್ರಶಾಂತ್ ಬೀರಿಕುಂಜ, ಕ್ರೀಡಾ ಸಂಚಾಲಕರಾಗಿ ರಾಮ ಮುಂಡಿತ್ತಡ್ಕ, ಕಲಾ ಸಂಚಾಲಕರಾಗಿ ಬಾಲಕೃಷ್ಣ ಮಾಸ್ತರ್ ಮೂಜುಕುಮೂಲೆ ಹಾಗೂ ಹತ್ತು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಗಲಿದ ಸಂಘದ ಹಿರಿಯ ಕಾರ್ಯಕರ್ತ ಸೀತರಾಮ ಅರಿಪ್ಪಾದೆ ಅವರಿಗೆ ಸಂಘದ ವತಿಯಿಂದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.