ಕಾಸರಗೋಡು: ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ವತಿಯಿಂದ ಕಾಞಂಗಾಡು ಎಲ್.ಬಿ.ಎಸ್. ಸೆಂಟರ್ ಮುಖಾಂತರ ನಡೆಸಲಾಗುವ ಇಂಗ್ಲೀಷ್, ಮಲಯಾಳ ಡಾಟಾ ಎಂಟ್ರಿ ಆಂಡ್ ಆಫೀಸ್ ಆಟೋಮೇಷನ್ ಉಚಿತ ಆನ್ ಲೈನ್ ಕೋರ್ಸ್ ಗೆ ಅರ್ಜಿ ಆಹ್ವಾಣಿಸಲಾಗಿದೆ. ಆಸಕ್ತ ನಿವೃತ್ತ ಸೈನಿಕರು, ನಿವೃತ್ತ ಸೈನಿಕರ ವಿಧವೆಯರು, ಆಶ್ರಿತರು ಆ.20ರ ಮುಂಚಿತವಾಗಿ ದೂರವಾಣಿ ಸಂಖ್ಯೆ: 04994256860 ಗೆ ಕರೆಮಾಡಿ ಹೆಸರು ನೋಂದಣಿ ನಡೆಸಬೇಕು. ಸಂಬಂಧಪಟ್ಟ ದಾಖಲೆ ಪತ್ರಗಳ ಸಹಿತ ಕಚೇರಿಗೆ ನೇರವಾಗಿ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಸೈನಿಕ ಕಲ್ಯಾಣ ಅಧಿಕಾರಿ ಪ್ರಕಟಣೆತಲ್ಲಿ ತಿಳಿಸಿದ್ದಾರೆ.