ಕಾಸರಗೋಡು: ಜನಪರ ಯೋಜನೆಯ 25 ನೇ ವಾರ್ಷಿಕೋತ್ಸವ( ಬೆಳ್ಳಿಹಬ್ಬ ಆಚರಣೆ) ಕ್ಕೆ ಇಂದು ಚಾಲನೆ ಲಭಿಸಲಿದೆ.
ರಾಜ್ಯಾದ್ಯಂತ ನಡೆಯುವ ಸರಣಿ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲೂ ವಿವಿಧ ಕಾರ್ಯಕ್ರಮಗಳು ಈ ಮೂಲಕ ನಡೆಯಲಿವೆ. ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಯೋಜನೆ ಸಮಿತಿ ಜಂಟಿ ವತಿಯಿಂದ ನಡೆಯುವ ಸಮಾರಂಭಗಳು 17ರಂದು ಉದ್ಘಾಟನೆಗೊಳ್ಳಲಿವೆ. ಮಧ್ಯಾಹ್ನ 2 ಗಂಟೆಗೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಮಾಜಿ ಹಣಕಾಸು ಸಚಿವ ಡಾ. ಟಿ.ಎಂ.ಥಾಮಸ್ ಐಸಕ್, ಸ್ಥಳೀಯಾಡಳಿತ ಸಂಸ್ಥೇಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾರದಾ ಮುರಳೀಧರನ್ ಪ್ರಧಾನ ಭಾಷಣ ಮಾಡುವರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ನ್ಯಾಯವಾದಿ ಸಿ.ಎಚ್.ಕುಂಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್ ಮೊದಲಾದವರು ಉಪಸ್ಥಿತರಿರುವರು. ವಿವಿಧ ಕಾರ್ಯಕ್ರಮಗಳ ಅಂಗವಾಗಿ ಜಿಲ್ಲಾ ಪಂಚಾಯತ್ ನಲ್ಲಿ ಹಿಂದೆ ಅಧ್ಯಕ್ಷರಾಗಿದ್ದ, ಉಪಾಧ್ಯಕ್ಷರಾಗಿದ್ದವರಿಗೆ, ವಿವಿಧ ಜನಪ್ರತಿನಿಧಿಗಳಿಗೆ, ಸಿಬ್ಬಂದಿಗೆ, ಯೋಜನೆ ಸಮಿತಿ ಕಾರ್ಯಕರ್ತರಿಗೆ ಅಭಿನಂದನೆ ನಡೆಯಲಿವೆ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಅಭಿನಂದನೆ ಭಾಷಣ ಮಾಡುವರು.
ಕಾರ್ಯಕ್ರಮದ ಆನ್ ಲೈನ್ ಲಿಂಕ್ : https://zoom.com.cn/j/
ಮೀಟಿಂಗ್ ID: 84967961057, ಪಾಸ್ ಕೋಡ್ : 803385.