ಮಲಪ್ಪುರ: ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ವಿರುದ್ಧದ ಕಾಂಗ್ರೆಸ್ಸ್ ಪಕ್ಷದ ಮಲಪ್ಪುರಂ ನ ವಿಭಾಗವೊಂದು ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸಿದೆ. ಹಿರಿಯ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ರಾಜ್‍ಮೋಹನ್ ಉಣ್ಣಿತ್ತಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಉನ್ನತ ನಾಯಕರಿಗೆ ಒತ್ತಡ ಹೇರಲಾಗಿದೆ.
ರಾಜ್ ಮೋಹನ್ ಉಣ್ಣಿತ್ತಾನ್ ವಿರುದ್ದ ಈ ಬಗ್ಗೆ ದೂರನ್ನು ಹೈಕಮಾಂಡಿಗೆ ವರ್ಗಾವಣೆ ಮಾಡಲಾಗಿದೆ. ಇಪ್ಪತ್ತರಷ್ಟು ನಾಯಕರು ರಾಜ್‍ಮೋಹನ್ ಉಣ್ಣಿತ್ತಾನ್ ವಿರುದ್ಧ ರಂಗಕ್ಕೆ ಬಂದಿರುವರೆನ್ನಲಾಗಿದೆ. ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ ಮತ್ತು ಉಮ್ಮನ್ ಚಾಂಡಿಯ ವಿರುದ್ದ ಉಣ್ಣಿತ್ತಾನ್ ಬಹಿರಂಗ ಹೇಳಿಕೆ ನೀಡಿದ್ದರಿಂದ ಉಣ್ಣಿತ್ತಾನ್ ವಿರುದ್ಧ ತುರ್ತು ಕ್ರಮಕ್ಕೆ ಒತ್ತಾಯಿಸಲಾಗಿದೆ.
ಡಿಸಿಸಿ ಅಧ್ಯಕ್ಷರ ಪಟ್ಟಿಗೆ ಸಂಬಂಧಿಸಿದ ವಿವಾದಗಳು ಈಗಾಗಲೇ ಕಾಂಗ್ರೆಸ್ಸ್ ನೊಳಗೆ ಭಿನ್ನಮತ ಬುಗಿಲೆದ್ದಿದ್ದು, ರಾಜ್ ಮೋಹನ್ ಉಣ್ಣಿತ್ತಾನ್ ಅವರ ಹೇಳಿಕೆಗಳೊಂದಿಗೆ ಭಿನ್ನಮತದ ಹೊಗೆ ತೀವ್ರಗೊಳ್ಳುತ್ತಿದೆ.
ಡಿಸಿಸಿ ಅಧ್ಯಕ್ಷರ ಪಟ್ಟಿ ಘೋಷಿಸಿದ ಕೇಂದ್ರದ ನಾಯಕತ್ವ ಮತ್ತು ಪಕ್ಷದೊಳಗೆ ಭಿನ್ನಮತಕ್ಕೆ ಪ್ರೇರಣೆ ಮತ್ತು ಗುಂಪುಗಾರಿಕೆಗೆ ಪ್ರೋತ್ಸಾಹಿಸಿದ ಯಾವನೇ ಹಿರಿಯ ನಾಯಕನಾದರೂ ಹೊರಗೆ ಕಳಿಸಬೇಕು ಎಂದು ಉಣ್ಣಿತ್ತಾನ್ ಪ್ರತಿಕ್ರಿಯಿಸಿದ್ದರು.