ತಿರುವನಂತಪುರ: ರಾಜ್ಯದಲ್ಲಿ ಹೇರಲಾಗಿರುವ ಲಾಕ್‍ಡೌನ್ ವ್ಯವಸ್ಥೆಯನ್ನು ಬದಲಾವಣೆ ತರಲು ಸರ್ಕಾರ ನಿರ್ಧಾರ ಪ್ರಕಟಿಸಿದೆ. ಟಿಪಿಆರ್ ಆಧಾರಿತ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇನ್ನು ಸೋಂಕಿತರ ಸಂಖ್ಯೆಗೆ ನಿರ್ಬಂಧಗಳನ್ನು ವಿಧಿಸಲಾಗುವುದು. ಇಂದು ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ನಾಳೆ ವಿಧಾನಸಭೆಯಲ್ಲಿ ಹೊಸ ನಿರ್ಬಂಧಗಳನ್ನು ಘೋಷಿಸಲಿದ್ದಾರೆ.
ನಿಯಮಗಳ ಬದಲಾವಣೆಯ ಭಾಗವಾಗಿ ವಾರಾಂತ್ಯದ ಲಾಕ್‍ಡೌನ್ ನ್ನು ಭಾಗಶಃ ತೆಗೆದುಹಾಕಿದಂತಾಗಿದೆ. ಅಂಗಡಿ ಮುಗ್ಗಟ್ಟುಗಳು ಇನ್ನು ಸೋಮವಾರದಿಂದ ಶನಿವಾರದವರೆಗೆ ಪೂರ್ಣ ಪ್ರಮಾಣದಲ್ಲಿ ತೆರೆಯಬಹುದಾಗಿದೆ. ವಾರಾಂತ್ಯದ ಲಾಕ್‍ಡೌನ್ ಭಾನುವಾರ ಮಾತ್ರ ಇರಲಿದೆ.
ನಿಯಂತ್ರಣವು ರಾಜ್ಯದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಸಾವಿರದಲ್ಲಿ ಎಷ್ಟು ಜನರು ಪಾಸಿಟಿವ್ ಆಗಿದ್ದಾರೆ ಎಂಬುದನ್ನು ನೋಡಿ ಮತ್ತು ಪ್ರತಿ ಪ್ರದೇಶದಲ್ಲಿ ಕೊರೋನಾ ಹರಡುವುದನ್ನು ಪರೀಕ್ಷಿಸಲಾಗುತ್ತದೆ. ಹೆಚ್ಚು ರೋಗಿಗಳಿರುವಲ್ಲಿ ಹೆಚ್ಚಿನ ನಿರ್ಬಂಧಗಳು ಇರುತ್ತವೆ. ಸೋಂಕು ಕಡಿಮೆ ಇರುವ ಪ್ರದೇಶಗಳಲ್ಲಿ ವಿನಾಯ್ತಿ ನೀಡಲಾಗುವುದು. ವಿನಾಯಿತಿಗಳು ಮುಂದಿನ ವಾರದಿಂದ ಜಾರಿಗೆ ಬರಲಿವೆ.